-->
Bookmark

Naregal : ಪ್ರೇಮಿಗಳಿಬ್ಬರ ಆತ್ಮಹತ್ಯೆ : ಸಾವಿನಲ್ಲಿ ಒಂದಾದ ಜೊಡಿ

Naregal : ಪ್ರೇಮಿಗಳಿಬ್ಬರ ಆತ್ಮಹತ್ಯೆ : ಸಾವಿನಲ್ಲಿ ಒಂದಾದ ಜೊಡಿ 

ನರೇಗಲ್ : ( Aprl_13_2024)

ನರೇಗಲ್ ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷದ  ಅಪ್ಪಣ್ಣ ಮತ್ತು 26 ವರ್ಷದ ಲಲಿತಾ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಅಪ್ಪಣ್ಣ ಮತ್ತು ಲಲಿತಾ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಯುವತಿಗೆ ಬೇರೆ ಯುವಕನನ್ನ ನೋಡಿ ಮನೆಯಲ್ಲಿ ಮದುವೆ ಮಾಡಿದ್ದಾರೆ. ಇದರಿಂದ ಅಪ್ಪಣ್ಣ ಎಂಬ ಯುವಕ ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಯಾಗಲಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ನೊಂದು ಜಿಗುಪ್ಸೆಗೊಂಡಿದ್ದ ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ. 

ಈ ಪ್ರೇಮಿಗಳು ನರೇಗಲ್_ಗಜೇಂದ್ರಗಡ ರಸ್ತೆಯಲ್ಲಿರುವ ರಾಮಣ್ಣ ಹುಲ್ಲೂರ್ ಎಂಬುವವರ ಜಮೀನಿನ ಹುಣಸೆ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. 

ಪ್ರೇಮಿಸುವವರು ಮನೆಯವರನ್ನ ಒಲಿಸಿ, ಮದುಯಾಗಿ, ಮದುವೆಯಾದ ಬಳಿಕ ಇಂತಹ ಹೇಡಿ ತನಕ್ಕೆ ಬಲಿಯಾಗದಿರಿ... 

ಪ್ರೀತಿ ಎಂಬುದು ಸ್ವಚ್ಛಂದ, ನಾವು ಪ್ರೀತಿಸುವುದು ನಿಜವೆ ಆಗಿದ್ದರೇ, ಅದರಂತೆ ಎಲ್ಲವೂ ನಡೆಯುತ್ತದೆ. ನಾವು ಜೀವನದಲ್ಲಿ ಸ್ವಲ್ಪ ಯಾಮಾರಿದರೂ, ತಕ್ಕ ಬೆಲೆ ತೆರಬೇಕಾಗುತ್ತದೆ. 

ಮದುವೆಗೂ ಮುನ್ನ ತಂದೆತಾಯಿಗಳಿಗೆ ಒಪ್ಪಿಸಿ, ಮಕ್ಕಳ ಸಂತೋಷಕ್ಕಿಂದ ಬೇರೊಂದಿಲ್ಲ.‌ ಆದ್ರೆ, ಒಪ್ಪಿಸುವ ಮಾರ್ಗ ಸರಿಯಾಗಿರಬೇಕು. ಮತ್ತೊಂದೆಡೆ, ತಂದೆ_ತಾಯಿ ಮುತ್ತು ಕುಟುಂಬದವರೂ ಸಹ ಮಕ್ಕಳಿಗೆ ತಿಳಿ ಹೇಳಿ, ಅವರ ಮನವೊಲಿಸಿ, ಎದೆ ಎತ್ತರಕ್ಕೆ ಬೆಳೆದ ಮಕ್ಕಳು ಕಣ್ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೇ ಅದು ಸಹಿಸಲಾಗದ ನೋವು ಕೊಡಲಿದೆ. 

ಅವರು ಹಾಕಿರುವ ಟಿ ಶರ್ಟ್ ಮೇಲೆ LOVE ಅಂದ್ರೆ, ಹುಡುಗನ ಟಿ ಶರ್ಟ್ ಮೇಲೆ LO  ಇದ್ರೆ, ಯುವತಿ ಟಿ ಶರ್ಟ್ ಮೇಲೆ VE ಅಂತಾ ಬರೆದಿದೆ. ಅಂದ್ರೆ ಇಬ್ಬರು ಸೇರಿ LOVE ಅಂತಾ... ಇವರ ಪ್ರೀತಿ ಇಷ್ಟೆ ನಾ...? 

ಒಂದೆ ಮರಕ್ಕೆ ಬೇರೆ ಬೇರೆ ಟೊಂಗೆಗೆ ತಮ್ಮ ಜೀವ ಕೊಟ್ಟು ಜೀವನದಲ್ಲಿ ಸಾಧಿಸಿದ್ದಾದರೂ ಏನು ?

ಪ್ರಕರಣ ಸಂಭಂಧಿಸಿದಂತೆ ನರೇಗಲ್ ಪಟ್ಟಣ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಿಎಸ್ ಐ ಶಿವಾನಂದ್ ಎನ್ ಬನ್ನಿಕೊಪ್ಪ ನೇತೃತ್ವದಲ್ಲಿ ಎಫ್.ಐ.ಆರ್ ದಾಖಲಾಗಿದೆ.
Post a Comment

Post a Comment