ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಜಯಂತಿಯನ್ನ ಗಜೇಂದ್ರಗಡದಲ್ಲಿ ಅದ್ದೂರಿಯಾಗಿ ಆಚರಿಸಲಾಯ್ತು. ಪಟ್ಟಣದ ಭೋವಿ ಸಮಾಜದ ವತಿಯಿಂದ ಪುರಸಭೆ ಮುಂಭಾಗದಲ್ಲಿರುವ ಸಮಾಜದ ಕಛೇರಿಲ್ಲಿ ಆಚರಿಸಿದರು
ಸಮಾಜದ ಭಾಂಧವರೆಲ್ಲರೂ ಸೇರಿ ಆಚರಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಭಾರತದ ಪ್ರಜಾಪ್ರಭುತ್ವ ಒಂದೆ ಒಂದು ಆಧಾರದ ಮೇಲೆ ನಿಂತಿದೆ, ಅದುವೆ ಸಂವಿಧಾನ. ಇಂತಹ ಸಂವಿಧಾನದವನ್ನ ರಚನೆ ಮಾಡಿದ ಮಹಾ ನಾಯಕ ಡಾ. ಬಿ.ಆರ್. ಅಂಬೇಡ್ಕರ್.. ಅವರ ಆದರ್ಶ ಎಲ್ಲರೂ ಪಾಲಿಸಬೇಕು. ಸಂವಿಧಾನ ನಮ್ಮ ಉಸಿರಾಗಬೇಕೆಂದು ಮುಖಂಡರು ಮಹಾನಾಯಕನ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಮುದಿಯಪ್ಪ ಮೂಧೋಳ, ಗಿಡ್ಡಪ್ಪ ಪೂಜಾರ, ಬಸವರಾಜ ಬಂಕದ , ಯಲ್ಲಪ್ಪ ಬಂಕದ ,ಷಣ್ಮುಖಪ್ಪ ಚಿಲಝರಿ , ಹನಮಂತ ಗೌಡ್ರ , ತಿರುಪತಿ ಕಲ್ಲೊಡ್ಡರ , ಮಾರುತಿ ಕೊಡಗಾನೂರ , ಪಕೀರಪ್ಪ ನಿಡಗುಂದಿ , ವಿಠ್ಠಲ ಗೌಡ್ರ , ಕಳಕಪ್ಪ ಮನ್ಯರಾಳ , ಬಸವರಾಜ ನಿಡಗುಂದಿ , ಬಸವರಾಜ ಅಸೂಟಿ ಉಪಸ್ಥಿತರಿದ್ದರು.
ವರದಿ : ಕಿರಣ್ ನಿಡಗುಂದಿ
Post a Comment