ಗಜೇಂದ್ರಗಡದ ಜನತೆ ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದರು. ಶುಕ್ರವಾರ ಸಂಜೆ ಪಟ್ಟಣದಲ್ಲಿ ಮಳೆಯಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆಯಾಗಿದೆ. ಬಿಸಿಲಿ ಝಳದಿಂದ ಕಾದಿದ್ದ ಭುವಿಗೆ ಮಳೆರಾಯ ತಂಪೆರೆದಿದ್ದಾನೆ.
ಸಂಜೆ ಕೆಲ ಕಾಲ ಜೋರಾಗಿ ಗಾಳಿ ಬೀಸಿದೆ. ಗಾಳಿಯ ರಭಸಕ್ಕೆ ತೋಟದ ಮನೆಯಲ್ಲಿ ವಾಸವಾಗಿದ್ದ ರೈತರ ಶೆಡ್ ನಲ್ಲಿನ ತಗಡುಗಳು ಹಾರಿ ಹೋಗಿವೆ. ಇದರಿಂದ ರೈತರು ಕೆಲಕಾಲ ಆತಂಕದಲ್ಲಿದ್ದರು.
ಇತ್ತ, ಗುಡುಗು ಸಹಿತ ಮಳೆಯಾಗಿದ್ದು, ಈಗಲೇ ಮಳೆಯಾದ್ರೆ, ಮಳೆಗಾಲದಲ್ಲಿ ಮಳೆ ಕೊರತೆಯಾಗಲಿದೆ ಎಂದು ರೈತರಲ್ಲಿ ಬಿಸಿ, ಬಿಸಿ ಚರ್ಚೆಯಾಗುತ್ತಿದೆ.
Post a Comment