-->
Bookmark

Gajendragad : ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲು

Gajendragad : ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲು
 
ಗಜೇಂದ್ರಗಡ ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಗಜೇಂದ್ರಗಡ : (Aprl_10_2024)
ಪಟ್ಟಣದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ 2023-24ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.  ಪರೀಕ್ಷೆಗೆ ಹಾಜರಾಗಿದ್ದ 163 ವಿದ್ಯಾರ್ಥಿಗಳಲ್ಲಿ 136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ  ಶೇ 83.43 ರಷಾಗಿದ್ದು. ಇದರಲ್ಲಿ  21 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
 
 ವಾಣಿಜ್ಯ ವಿಭಾಗದಲ್ಲಿ  ಶ್ರೇಯಾ ಸಿದಲಿಂಗ್ (ಶೇ 96.66) ಪ್ರಥಮ, ಸೀತಾ ಜೋಶಿ (ಶೇ 95.16) ದ್ವಿತೀಯ, ಆಶಾ ಸೋಪಡ್ಲಾ (ಶೇ 91.16) ತೃತೀಯ  ಸ್ಥಾನ ಪಡೆದಿದ್ದಾರೆ.  
    
ವಿಜ್ಞಾನ ವಿಭಾಗದಲ್ಲಿ ಸುವರ್ಣಾ ವರಗಾ(ಶೇ 90.16) ಪ್ರಥಮ, ಸ್ನೇಹಾ ರಾಯಬಾಗಿ (ಶೇ 90.16) ದ್ವಿತೀಯ ಹಾಗೂ ದೀಪಾ ಗೂಡುರ (ಶೇ 89.83) ತೃತೀಯ ಸ್ಥಾನ ಪಡೆದಿದ್ದಾರೆ. 
 
 ಉಪನ್ಯಾಸಕರ ಸತತ ಪರಿಶ್ರಮದ ಫಲವಾಗಿ ಮಹಾವಿದ್ಯಾಲಯದ ಫಲಿತಾಂಶವು ಉತ್ತಮವಾಗಿ ಬಂದಿದೆ. ಇದಕ್ಕೆ ಆಡಳಿತ ಮಂಡಳಿಯ ಹಾಗೂ ಪಾಲಕರ ಸಹಕಾರ ದೊಡ್ಡದು ಎಂದು ಪ್ರಾಚಾರ್ಯ ವಸಂತರಾವ್‌ ಗಾರಗಿ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅನ್ನದಾನೇಶ್ವರ ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳು, ಆಡಳಿತಾಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಕಾಲೇಜಿನ ಮಂಡಳಿ ಚೇರಮನ್ನರು, ಸದಸ್ಯರು ಅಭಿನಂದನೆ ತಿಳಿಸಿದ್ದಾರೆ.

Post a Comment

Post a Comment