ನೆಲ್ಲೂರು : (Mar_09_2024)
ಪೀರಪ್ಪ ರಾಠೋಡ ಅವರ 3ನೇ ಪುಣ್ಯ ಸ್ಮರಣೆ ಆಚರಿಸಲಾಯ್ತು. ಸ್ವಗ್ರಾಮ ನೆಲ್ಲೂರು ಮತ್ತು ಅಕ್ಕಪಕ್ಕದ ಗ್ರಾಮದ ಜನರ ಜೀವನ ದುಸ್ತರವಾಗಿತ್ತು. ಆಗ, ಅವರ ಪಾಲೀನ ಆಶಾದೀಪವಾಗಿ ಬಡ ಜನರ ಬೆನ್ನಿಗೆ ನಿಂತವರು ಶಿವಪ್ಪಜ್ಜ ಪೀರಪ್ಪ ರಾಠೋಡ.
ಇವರಲ್ಲಿ ಜನರು ಸರತಿ ಸಾಲಿನಲ್ಲಿ ಬಂದು ನಿಂತು ತಮ್ಮ ಕಷ್ಟ ಸುಖವನ್ನ ಹೇಳಿಕೊಳ್ಳುತ್ತಿದ್ದರು. ಹೀಗೆ ಜನರು ಕಷ್ಟ ಅಂತಾ ಬಂದಾಗ ಅವರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಲು ಆರಂಭಿಸಿದರು. ನೋಡ ನೋಡುತ್ತಿದ್ದಂತೆ ಶಿವಪ್ಪಜ್ಜ ಪೀರಪ್ಪ ರಾಠೋಡ ನೆಲ್ಲೂರು ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲಿ ಚಿರಪರಿಚಿತರಾದ್ರು.
ದಿನಗಳು ಉರುಳುತ್ತಿದ್ದಂತೆ ತಾಲೂಕಿನಾದ್ಯಂತ ಹೆಸರುವಾಸಿಯಾದ್ರು. ಬೇರೆ ಜಿಲ್ಲೆಗಳಿಂದಲೂ ಜನರು ಶಿವಪ್ಪಜ್ಜ ಪೀರಪ್ಪ ರಾಠೋಡ ಅವರನ್ನ ನೋಡಲು ಬರಲಾರಂಭಿಸಿದರು. 96ರ ಇಳಿ ವಯಸ್ಸಿನಲ್ಲೂ ಇವರು, ಜನರೊಂದಿಗೆ ಸಂಪರ್ಕದಲ್ಲಿದ್ದರು.
ಇನ್ನೂ, ಶಿವಪ್ಪಜ್ಜ ಪೀರಪ್ಪ ರಾಠೋಡ ಕೊನೆಯುಸಿರೆಳೆದು ಇಂದಿಗೆ ಮೂರು ವರ್ಷಗಳು ಉರುಳಿವೆ. ಭಕ್ತಾದಿಗಳ ಆಶಯದ ಮೇರೆಗೆ ಶಿವಪ್ಪಜ್ಜ ಪೀರಪ್ಪ ರಾಠೋಡ ಅವರ ಕುಟುಂಬದವರು, ನೆಲ್ಲೂರು ಗ್ರಾಮದಲ್ಲಿ ಪುತ್ಥಳಿ ಅನಾವರಣ ಗೊಳಿಸಿದರು. ಅಪಾರ ಭಕ್ತರನ್ನ ಹೊಂದಿರುವ ಶಿವಪ್ಪಜ್ಜ ಪೀರಪ್ಪ ರಾಠೋಡ ನೆಲ್ಲೂರು ಮತ್ತು ಅಕ್ಕಪಕ್ಕದ ಗ್ರಾಮದ ಜನತೆ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ.
ಪವಾಡಗಳನ್ನು ಮಾಡುತ್ತಿದ್ದ, ಇಂದಿನ ಕಾಲದಲ್ಲಿ ಊಹಿಸಲು ಸಾಧ್ಯವಾಗದ ಪವಾಡಗಳಾಗಿವೆ. ಈಗ ಅವುಗಳನ್ನ ಹೇಳಿದರೇ, ಸಿನೆಮಾ ಕಥೆ ಹೇಳುತ್ತಾರೆ ಎನ್ನುವಂತಾಗುತ್ತದೆ ಎಂದು ಶಿವಪ್ಪಜ್ಜ ಅವರ ಹಿರಿಮಗ ಪೀರಪ್ಪ ಶಿವಪ್ಪಜ್ಜ ರಾಠೋಡ ಹೇಳುತ್ತಾರೆ.
ಶಿವಪ್ಪಜ್ಜ ಪೀರಪ್ಪ ರಾಠೋಡ ಅವರಿಗೆ 6 ಗಂಡು ಮಕ್ಕಳು, ಐವರು ಪುತ್ರಿಯರಿದ್ದಾರೆ. ಅವರ ಪೈಕಿ ಇಬ್ಬರು ಅಂದರೇ, ರಾಮಪ್ಪ ಶಿವಪ್ಪಜ್ಜ ರಾಠೋಡ, ನವೀನಕುಮಾರ್ ಶಿವಪ್ಪಜ್ಜ ರಾಠೋಡ ಅವರು ಅವರ ತಂದೆಯ ಕಾಯಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ತಂದೆಗೆ ಜನರು ತೋರಿದ ಪ್ರೀತಿಗೆ, ಕಾಳಜಿಗೆ ಸದಾ ಋಣಿ ಎಂದು ಕಿರಾ ನ್ಯೂಸ್ ಕನ್ನಡಕ್ಕೆ ಪೀರಪ್ಪ ಶಿವಪ್ಪಜ್ಜ ರಾಠೋಡ
ಕುಟುಂಬ ಹೇಳಿದ್ದಾರೆ.
ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನೆಲ್ಲೂರು_ಪ್ಯಾಟಿ ಗ್ರಾಮದ ಗುರು ಹಿರಿಯರು ಸೇರಿದಂತೆ ಗ್ರಾಮದಲ್ಲಿ ಪುಣ್ಯಸ್ಮರಣೆ ಜನರ ಸ್ಮರಣ ಪಟಲದಿಂದ ಅಳಿಸಲಾಗದೇ ಅಚ್ಚಾಗಿರಲಿದೆ.
Post a Comment