-->
Bookmark

Gajendragad : ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ಕಲ್ಪಿಸಿದ ಶಾಸಕರಿಗೆ ಕೃತಜ್ಞತೆ : ದಾವಲಸಾಬ್ ತಾಳಿಕೋಟಿ

Gajendragad : ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ಕಲ್ಪಿಸಿದ ಶಾಸಕರಿಗೆ ಕೃತಜ್ಞತೆ : ದಾವಲಸಾಬ್ ತಾಳಿಕೋಟಿ 
ಗಜೇಂದ್ರಗಡ : (Mar_09_2024)
ಮುಸ್ಲಿಂ ಸಮುದಾಯದ ನಾಯಕರಿಗೆ ಎಲ್ಲ ಕ್ಷೇತ್ರಗಳಲ್ಲಿ ಸ್ಥಾನ ಕಲ್ಪಿಸುವ ಮೂಲಕ ಶಾಸಕರಾದ ಜಿ ಎಸ್ ಪಾಟೀಲ್ ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದಾರೆ. 

ಇದೀಗ ಪುರಸಭೆ ನಾಮನಿರ್ದೇಶನ ಸದಸ್ಯ ಸ್ಥಾನ, ಜಿಲ್ಲಾ ವಕ್ಪ್ ಬೋರ್ಡ್ ನಿರ್ದೇಶಕ,   ಆಶ್ರಯ ಸಮಿತಿ, ಸೇರಿದಂತೆ ಆರೋಗ್ಯ  ಸಮಿತಿಗಳಲ್ಲಿ ನಮ್ಮ ಸಮುದಾಯದವರಿಗೆ ಅವಕಾಶ ನೀಡುವ ಮೂಲಕ ಶಾಸಕರು ಈ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಳ್ಳುವ ಮೂಲಕ ನುಡಿದಂತೆ ನಡೆದ ನಾಯಕರು ಎಂದೆನಿಸಿಕೊಂಡಿದ್ದಾರೆ.   

ಈ ಹಿಂದೆ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮನವಿ ನೀಡಿ ನಮಗೂ ಕೂಡಾ ಪ್ರಾತಿನಿಧ್ಯ ಕಲ್ಪಿಸಿ ಸಮುದಾಯದ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ನಮ್ಮವರಿಗೂ ಹೆಚ್ಚಿನ ರಾಜಕೀಯ ಸ್ಥಾನಮಾನ ನೀಡಿ ಎಂದು ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಶಾಸಕರು ಎಲ್ಲ ಕ್ಷೇತ್ರದಲ್ಲಿ ಅವಕಾಶ ನೀಡಿದ್ದು ಸಂತಸ ತಂದಿದೆ.

ನುಡಿದಂತೆ ನಡೆದ ಶಾಸಕರಿಗೆ ಸಮುದಾಯದ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅಂಜುಮಾನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ, ಹಾಲಿ‌ ನಿರ್ದೇಶಕ ದಾವಲಸಾಬ ತಾಳಿಕೋಟಿ ಪತ್ರಿಕಾ ಪ್ರಕಟನೆಗೆ ತಿಳಿಸಿದರು.
Post a Comment

Post a Comment