ಗಜೇಂದ್ರಗಡ : (Mar_19_2024)
ಗಜೇಂದ್ರಗಡದಲ್ಲಿ ಇತ್ತಿಚೇಗೆ ಹಾವೇರಿ_ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರಚಾರ ನಡೆಸಿದರು.
ಹಾವೇರಿ ಗದಗ ಕ್ಷೇತ್ರ ಸುಲಭವಾಗಿ ಗೆಲ್ಲಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ತಮ್ಮ ಕ್ಷೇತ್ರದದಲ್ಲಿ ಚುನಾವಣಾ ಪ್ರಚಾರ ನಡೆಸಿ ಮುಗಿಸಿದರೇ ಬಳಿಕ ಬೇರೆ ಕ್ಷೇತ್ರದ ಪ್ರಚಾರಕ್ಕೂ ತೆರಳಬಹುದು. ಬಿಜೆಪಿಗೆ ಹಾವೇರಿ ಗದಗ ಲೋಕಸಭಾ ಕ್ಷೇತ್ರ ಸುಲಭದ ತುತ್ತಾಗಿ ಪರಿಗಣಿಸಿರುವುದು ಕಾಂಗ್ರೆಸ್ ಗೆ ತಿಳಿಯದಿರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಹಾವೇರಿ_ಗದಗ ಕ್ಷೇತ್ರಕ್ಕೆ ಸಾಲು ಸಾಲು ಆಕಾಂಕ್ಷಿಗಳಿದ್ದರೂ, ಅವರಿಗೆ ಟಿಕೇಟ್ ನೀಡದೇ ಬಿಜೆಪಿ ಬೊಮ್ಮಾಯಿ ಅವರಿಗೆ ಟಿಕೇಟ್ ನೀಡಿ, ಚಾಣಾಕ್ಷ ನಡೆಯನ್ನ ಪ್ರದರ್ಶಿಸಿತ್ತು. ಆದ್ರೇ, ಮೇ 7 ರಂದು ಮತದಾನ ನಡೆಯಲಿದ್ದು, ಗಜೇಂದ್ರಗಡಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿ ಹೋಗಿದ್ದು, ಕಮಲ ಪಾಳಯಕ್ಕೆ ಒಳ್ಳೆಯ ನಡೆಯಾಗಿದೆ. ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರಿದ್ದು, ಲೋಕ ಸಮರಕ್ಕೆ ಜನರ ಮೊದಲ ಆಯ್ಕೆ ಬಿಜೆಪಿಯಾಗಿದ್ದು, ಹಲವು ಚುನಾವಣೋತ್ತರ ವರದಿಗಳು ಬಹಿರಂಗ ಪಡಿಸಿವೆ. ಹಾವೇರಿ_ಗದಗ ಕ್ಷೇತ್ರದಲ್ಲಿ ಬಿಜೆಪಿಗೆ ಸುಲಭದ ಜಯ ಸಿಗಲಿದೆಯಾ ? ಇನ್ನೂ ಮಾಜಿ. ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಯಾವ ರೀತಿ ರಣತಂತ್ರ ರೂಪಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.
Post a Comment