ಗಜೇಂದ್ರಗಡ: (Aprl_01_2024)
ರಮ್ಜಾನ್ ಮಾಸದಲ್ಲಿ ನಡೆಯುವ ಇಫ್ತಾರ್ ಕೂಟ ಸಮಾಜಕ್ಕೆ ಸಾಮರಸ್ಯದ ಸಂಕೇತವಾಗಿದೆ ಎಂದು ಮಾಜಿ ಗ್ರಾ.ಪಂ ಅಧ್ಯಕ್ಷ ಬಸವರಾಜ್ ಮೂಲಿಮನಿ ಹೇಳಿದರು. ಗೋಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ರಮ್ಜಾನ್ ಮಾಸವು ಅತ್ಯಂತ ವೈಶಿಷ್ಟಪೂರ್ಣವಾದ ಮಾಸವಾಗಿದ್ದು ಮುಸ್ಲಿಮರು ಅತ್ಯಂತ ಪ್ರಾಧಾನ್ಯತೆಯೊಂದಿಗೆ ರಮ್ಜಾನ್ ರೋಜಾ ನಡೆಸುತ್ತಾರೆ. ಇಫ್ತಾರ್ ಕೂಟದ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದತೆ ಬೀರಲು ಸಾಧ್ಯ ಎಂದರು.
ಇದೇ ವೇಳೆ, ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಐ ಬಾಗವಾನ ಅವರು ಮಾತನಾಡಿ ‘ಇಫ್ತಾರ್ ಕೂಟಗಳು ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಬರುವಲ್ಲಿ ಸಹಕಾರಿಯಾಗಿವೆ. ಇಂತಹ ಇಫ್ತಾರ್ ಕೂಟಗಳಲ್ಲಿ ಎಲ್ಲಾ ಹಿಂದೂ, ಮುಸ್ಲಿಮರು ಭಾಗವಹಿಸಿ ಸೌಹಾರ್ದತೆ ಬೆಳೆಸುವ ಅಗತ್ಯ ಇದೆ’ ಎಂದರು.
ಇನ್ನೂ, ಶಿಕ್ಷಕ ಆರ್ ಕೆ ಬಾಗವಾನ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಬದ್ಧತೆಯಲ್ಲಿ ಸೌಹಾರ್ದತೆ ಮೆರೆಯೋಣ, ಸಹೋದರತ್ವ ಮೆರೆಯೋಣ. ವೈಶಿಷ್ಟ ವ್ಯತ್ಯಾಸವಿರುವ ವಿಭಿನ್ನ ಸಮುದಾಯಗಳು ಸೇರಿ ಒಂದು ಸಾಮಾಜಿಕ ಸಾಮರಸ್ಯ ಮತ್ತು ಬದ್ಧತೆಯನ್ನು ಅರಸುವ ನಮ್ಮ ಸಮಾಜವು ವೈವಿಧ್ಯಮಯ ಜನಾಂಗ, ಭಾಷೆ, ಧರ್ಮ ಹಾಗೂ ಸಂಸ್ಕೃತಿಯನ್ನು ಒಳಗೊಂಡಿದೆ. ಇವುಗಳಲ್ಲೇ ಒಂದು ಸಮಸ್ಕ್ರತ ನಡವಳಿಕೆ ಮತ್ತು ಭಾಷೆ ಇಲ್ಲದ ವ್ಯಕ್ತಿಗಳು ಒಟ್ಟಾಗಿ ಬಾಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ಜೊತೆಗೆ ಭಿನ್ನತೆಯನ್ನು ಅರಿಯುವುದು ಮತ್ತು ಮೆರೆಯುವುದು ಸಮಾಜಿಕವಾಗಿ ಒಂದು ಅಗತ್ಯ ಪ್ರಯತ್ನ. ಸೌಹಾರ್ದತೆ ಮೆರೆಯೋಣ ಎಂದು ಆರ್.ಕೆ ಬಾಗವಾನ್ ಹೇಳಿದರು.
ಈ ವೇಳೆ, ಶೇಖರಪ್ಪ ಎಗರಿ, ಐ.ಹೆಚ್. ಬಾಗವಾನ, ಹುಸೇನಸಾಬ ಬಡಿಗೇರ, ಸಿಂಕದರ್ ಬಾಗವಾನ, ಶಂಕ್ರಯ್ಯ ಮೇಟಿಮಠ, ಕೆ ಕೆ ಬಾಗವಾನ, ಬಸಪ್ಪ ಗುಂಡೆ ಗ್ರಾಂ.ಪಂ. ಸದಸ್ಯರಾದ ಇಮಾಮಸಾಬ ಬಾಗವಾನ, ಗೌಡೇಶ ಗುಂಡೆ, ರುದ್ರೇಶ ಕೆರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment