ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಯಾಗಲಿ ಮತ್ತು 400 ಸೀಟುಗಳಿಂದ ಗೆಲುವು ನಿಶ್ಚಿತವಾಗಲಿ ಎಂದು ಗಜೇಂದ್ರಗಡದಿಂದ ಯುವ ನೇತಾರ ಅಂದಪ್ಪ ಸಂಕನೂರ್ ಅಯೋಧ್ಯೆಯ ಶ್ರೀ ರಾಮ ದರ್ಶನಕ್ಕೆ ಸಂಕಲ್ಪ ಯಾತ್ರೆಯೊಂದಿಗೆ ತೆರಳುತ್ತಿದ್ದಾರೆ. ಯುವ ಮುಖಂಡ ಅಂದಪ್ಪ ಸಂಕನೂರ್ ಅವರು ಗಜೇಂದ್ರಗಡದ ಗ್ರಾಮ ದೇವತೆ ಹೀರೇ ದುರ್ಗಾದೇವಿ ದೇವಸ್ಥಾನದಿಂದ ಯಾತ್ರೆ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿರುವ ಅಂದಪ್ಪ ಸಂಕನೂರ್ ಅವರು ಗದಗ ನಗರದ ಕಿರಣ್ ಬಂಡಿಹಾಳ್ ಅವರೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ನೇಂದ್ರ ಮೋದಿ 3.O ಯಾತ್ರೆ ಇದಾಗಿದ್ದು, ಪ್ರಧಾನಿ ಮೋದಿ ಅವರು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ. ಅಯೋಧ್ಯೆ ಯ ಬಾಲರಾಮ ಪ್ರಧಾನಿ ಅವರಿಗೆ ಆಶೀರ್ವದ ಸದಾ ಇರಲೆಂದು ಬೇಡಿಕೊಂಡಿರುವುದಾಗಿ ಅಂದಪ್ಪ ಸಂಕನೂರ್ ಅವರ ಆಪ್ತರು ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಬಿಜೆಪಿ ಅಥವಾ ಆರ್.ಎಸ್.ಎಸ್ ಅನ್ನು ಇತ್ತೀಚಿನ ದಿನಗಳಲ್ಲಿ ಬೆಳೆಸಿದವರ ಸಾಲಿನಲ್ಲಿ ಅಂದಪ್ಪ ಸಂಕನೂರ್ ಹೆಸರು ಮುಂಚೂಣಿಯಲ್ಲಿದೆ. ಇನ್ನೂ, ಹನುಮ ಮಾಲೆ ಧರಿಸುವಾಗ ಯುವರನ್ನ ಒಂದೆಡೆ ಸೇರಿಸಿ, ಅವರನ್ನ ಬಿಜೆಪಿ ಆಡಳಿತದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನ ಮಾಡುತ್ತಲೇ ಇರಿತ್ತಾರೆ. ರೋಣ ಮತ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿರುವ ಅಂದಪ್ಪ ಸಂಕನೂರ್ ಅವರು ಯುವಕರ ಕಣ್ಮಣಿಯೂ ಹೌದು...
Post a Comment