-->
Bookmark

Gajendragad : ಕಳ್ಳತನ ಸೇರಿ‌ ಎಮರ್ಜೆನ್ಸಿಯಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಜಾಗೃತಿ : ಪೊಲೀಸ್ ಇಲಾಖೆ ಕಾರ್ಯಕ್ಕೆ ಶ್ಲಾಘನೆ

Gajendragad : ಕಳ್ಳತನ ಸೇರಿ‌ ಎಮರ್ಜೆನ್ಸಿಯಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಜಾಗೃತಿ : ಪೊಲೀಸ್ ಇಲಾಖೆ ಕಾರ್ಯಕ್ಕೆ ಶ್ಲಾಘನೆ 
ಗಜೇಂದ್ರಗಡ ; (Mar_19_2024)
ರಾಜ್ಯ ನಿರಾತಂಕವಾಗಿರಲು ಪೊಲೀಸ್ ಇಲಾಖೆ ಮುಖ್ಯ ಕಾರಣ.‌ ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸುವ ಶಕ್ತಿ ನಮ್ಮ ಪೊಲೀಸ್ ಇಲಾಖೆಗೆ ಇದೆ. ಈಗ ಗದಗ ಜಿಲ್ಲಾ‌ ಪೊಲೀಸ್ ಇಲಾಖೆಯ ಬಗ್ಗೆ ಹೇಳುವುದಾದ್ರೆ, ಸಾರ್ವಜನಿಕರಲ್ಲಿ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಗಜೇಂದ್ರಗಡ ಪಟ್ಟಣದಲ್ಲೂ ಪ್ರತಿ ಓಣಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.‌ 23ನೇ ವಾರ್ಡ್ ನ ಜನತಾ ಪ್ಲಾಟ್ ನಲ್ಲಿನ ಜಿ.ಎಸ್ ನಗರದಲ್ಲಿ ಗಜೇಂದ್ರಗಡ ಪೊಲೀಸರು ಜಾಗೃತಿ ಮೂಡಿಸಿದರು.‌ ಮನೆಯ ಸುರಕ್ಷತೆ, ಆಭರಣಗಳ ಸುರಕ್ಷತೆ, ಬ್ಯಾಗನಲ್ಲಿ ಸಾಮಗ್ರಿಳ ಸುರಕ್ಷತೆ, ಸಂಚರಿಸುವಾಗ ಕೈಗೊಳ್ಳಬೇಕಾದ ಕ್ರಮಗಳು ಮತ್ತು ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಕರೆ ಮಾಡುವ ನಂಬರ್ ಹೀಗೆ ಹತ್ತಾರು ಮಾಹಿತಿಗಳನ್ನ ನೀಡಲಾಯ್ತು.‌ ಗಜೇಂದ್ರಗಡ ವೇಗವಾಗಿ ಬೆಳೆಯುತ್ತಿದೆ. ಈಗ ಬರಗಾಲದಲ್ಲಿ ಅಲ್ಲಲ್ಲಿ ಕಳ್ಳತನದ‌ ಸುದ್ದಿಗಳು ಕೇಳಿ ಬರುತ್ತಿವೆ. ಜೊತೆಗೆ ಶಾಲಾ, ಕಾಲೇಜು ಮಕ್ಕಳಿಗೆ‌ಬೇಸಿಗೆ ರಜೆ‌ ಆರಂಭವಾಗುತ್ತಿದೆ. ರಜೆಗೆಂದು ತೆರಳುವಾಗ ಮನೆಯ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳನ್ನ ಎಳೆ ಎಳೆಯಾಗಿ ತಿಳಿಸಿದ್ರು. 
ಈ ವೇಳೆ, ಎ.ಎಸ್.ಐ ಟಿ.ಎಸ್  ರಾಠೋಡ್ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಯ್ತು. ಈ ವೇಳೆ, ಸಾರ್ವಜನಿಕರು ಪೊಲೀಸ್ ಇಲಾಖೆ‌ ಕಾರ್ಯವನ್ನ ಶ್ಲಾಘಿಸಿದರು.
Post a Comment

Post a Comment