-->
Bookmark

Gajendragad : ಭಾನುವಾರ 'ಅಕ್ಷರ ಸಂಗಾತ' ಪತ್ರಿಕೆ ಏಪ್ರಿಲ್ ಸಂಚಿಕೆ ಲೋಕಾರ್ಪಣೆ

Gajendragad : ಭಾನುವಾರ 'ಅಕ್ಷರ ಸಂಗಾತ' ಪತ್ರಿಕೆ ಏಪ್ರಿಲ್ ಸಂಚಿಕೆ ಲೋಕಾರ್ಪಣೆ 
ಗಜೇಂದ್ರಗಡ : (Mar_30_2024)
ಟಿ.ಎಸ್. ಗೊರವರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿ ನಂತರ 'ಅಕ್ಷರ ಸಂಗಾತ' ಎನ್ನುವ ಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿ ಸಂಚಲನ ಮೂಡಿಸಿದ್ದಾರೆ.

 ಜೊತೆಗೆ ಕತೆ, ಕಾದಂಬರಿಗಳನ್ನೂ ರಚಿಸಿದ್ದಾರೆ. ಈಗ ಅವರ ಸಂಪಾದಕತ್ವದ 'ಅಕ್ಷರ ಸಂಗಾತ'ದ ಏಪ್ರಿಲ್ ಸಂಚಿಕೆ ಸಿದ್ಧವಾಗಿ ಓದುಗರಿಗೆ ಲಭ್ಯ ವಿದೆ. ಆ ಸಂಚಿಕೆ ಲೋಕಾರ್ಪಣೆಯು ಗಜೇಂದ್ರಗಡದ ಜನತಾ ಪ್ಲಾಟ್ ನ ಬಂಜಾರ ಸಮುದಾಯ ಭವನದಲ್ಲಿ ಮಾರ್ಚ್ 31 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. 

ಸಮುದಾಯದ ಗುರು_ಹಿರಿಯರು, ಸಾಂಪ್ರದಾಯಿಕ ಉಡುಪಿನೊಂದಿಗೆ ಸಂಸ್ಕೃತಿ ಪರಂಪರೆ ಉಳಿಸುತ್ತಿರುವ ಮಹಿಳೆಯರು, ಯುವ‌‌ ಸಮೂಹ ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.‌ ಶಿಕ್ಷಕರಾದ ತಿಪ್ಪಾ ನಾಯ್ಕ್ ಎಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು,  ಅಕ್ಷರ ಸಂಗಾತದ ಸಂಪಾದಕರಾದ ಟಿ.ಎಸ್. ಗೊರವರ ಸೇರಿದಂತೆ ಕಿರಾ ನ್ಯೂಸ್ ತಂಡ ಸಹ ಭಾಗವಹಿಸಲಿದೆ.
Post a Comment

Post a Comment