-->
Bookmark

Gajendragad : ತಾಲೂಕಿನ ಗ್ಯಾರಂಟಿ ಯೋಜನೆಗೆ ಶರಣಪ್ಪ ಬೆಟಗೇರಿ ಅಧ್ಯಕ್ಷ : ಜಿ.ಎಸ್. ಪಾಟೀಲ್ ಆದೇಶ

Gajendragad : ತಾಲೂಕಿನ ಗ್ಯಾರಂಟಿ ಯೋಜನೆಗೆ ಶರಣಪ್ಪ ಬೆಟಗೇರಿ ಅಧ್ಯಕ್ಷ : ಜಿ.ಎಸ್. ಪಾಟೀಲ್ ಆದೇಶ 
ಗಜೇಂದ್ರಗಡ : (Mar_16_2024)

ನರೇಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶರಣಪ್ಪ ಬೆಟಗೇರಿ ಹಲವಾರು ದಶಕಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಬೂತ್ ಮಟ್ಟದಿಂದಲೇ ಸದೃಢವಾಗಿಸಿದರವಲ್ಲಿ ಶರಣಪ್ಪ ಬೆಟಗೇರಿ ಕೂಡ ಇಬ್ಬರು. ಅವರ ಕಾರ್ಯಗಳನ್ನ ಮೆಚ್ಚಿ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶಾಸಕರು ಆದ ಜಿ.ಎಸ್. ಪಾಟೀಲ್ ಅವರು ಶರಣಪ್ಪ ಬೆಟಗೇರಿ ಅವರನ್ನ ಗಜೇಂದ್ರಗಡ ತಾಲೂಕಾ ಗ್ಯಾರಂಟಿ ಕಮಿಟಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. 

ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಕ್ಕೆ ಶರಣಪ್ಪ ಬೆಟಗೇರಿ ಅವರ ಕುಟುಂಬಸ್ಥರು ಮತ್ತು ಆಪ್ತ ವಲಯ ಸಂತಸ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಗ್ಯಾರಂಟಿ ಯೋಜನೆ ಜವಾಬ್ದಾರಿಯನ್ನ ನೀಡಲಾಗಿದ್ದು, ಯಾವುದೇ ಅಡೆ ತಡೆ ಇಲ್ಲದೇ, ಎಲ್ಲರಿಗೂ ಸರ್ಕಾರದ ಯೊಜನೆ ತಲುಪುವಂತೆ ನೋಡಿಕೊಳ್ಳುವುದಾಗಿ ಶರಣಪ್ಪ ಬೆಟಗೇರಿ ತಿಳಿಸಿದ್ದಾರೆ.
Post a Comment

Post a Comment