-->
Bookmark

Gajendragad : ಕೊಡಗಾನೂರು ಸಮೀಪ ಬಸ್ ಪಲ್ಟಿ : 25 ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ ಗದಗ ಜಿಲ್ಲಾಸ್ಪತ್ರೆಗೆ ರವಾನೆ

Gajendragad : ಕೊಡಗಾನೂರು ಸಮೀಪ ಬಸ್ ಪಲ್ಟಿ : 25  ಮಂದಿಗೆ ಗಾಯ, ಕೆಲವರ ಸ್ಥಿತಿ ಚಿಂತಾಜನಕ : ಗದಗ ಜಿಲ್ಲಾಸ್ಪತ್ರೆಗೆ ರವಾನೆ 
ಗಜೇಂದ್ರಗಡ : (Mar_21_2024)
ಗಜೇಂದ್ರಗಡದಿಂದ ಗದಗ ಕಡೆಗೆ ಹೊರಡಿದ್ದ ಬಸ್ ಪಲ್ಟಿಯಾದ ಘಟನೆ ಕೊಡಗಾನೂರು ಸಮೀಪ ನಡೆದಿದೆ. ಬಸ್ ಪಲ್ಟಿಯಾದ ರಭಸಕ್ಕೆ 20 ರಿಂದ 25 ಮಂದಿಗೆ ಗಾಯಗಳಾಗಿವೆ. ಒಬ್ಬರು ವಯೋ ವೃದ್ಧ ಅಜ್ಜಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟು ಮೂರು ಆ್ಯಂಬುಲೆನ್ಸ್ ಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪುರ್ತಗೇರಿಯ ಯಮನೂರಪ್ಪ ಕಿರಾ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. 
ಈ ಭಾಗದಲ್ಲಿ ಬಸ್ ಪಲ್ಟಿಯಾಗುವ ಪ್ರಕರಣ ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಇಂತಹ ಘಟನೆ ನಡೆದರೂ, ಜಾಗೃತರಾಗದೇ, ಮತ್ತೆ ಇಂತಹ ಘಟನೆ ಮರುಕಳಿಸುತ್ತಿದೆ. ಇದರಿಂದ ಸಂಬಂಧ ಪಟ್ಟ ಇಲಾಖೆ, ಅಥವಾ ಅಧಿಕಾರಿಗಳು ಪಾಠ ಕಲಿತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಲ್ಲದೇ, ಅಲ್ಲಿ ನಾಮಫಲಕಗಳನ್ನ ಅಳವಡಿಸಬೇಕು. ಇಂತಹ ಯಾವುದೇ ಕಲಸ ಅಧಿಕಾರಿಗಳು ಮಾಡುತ್ತಿಲ್ಲ. ಪ್ರತಿ ಬಾರಿಯೂ ಇಂತಹ ಘಟನೆ ನಡೆದಾಗ ಸಾರ್ವಜನಿಕರಿಗೆ ತೊಂದರೇ, ಮುಂಬರುವ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಲಿದೆ. ಈಗಲಾದರೂ, ಅಧಿಕಾರಿಗಳು, ಸಂಬಂಧಿ ಪಟ್ಟ ಇಲಾಖೆ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮ ವಹಿಸುವುದು ಒಳಿತು.
Post a Comment

Post a Comment