ದೇಶದೆಲ್ಲೆಡೆ ಒಂದೆಡೆ ಎಲ್ಲರೂ ಶಿವ ರಾತ್ರಿ ಸಂಭ್ರಮದಲ್ಲಿದ್ದರೇ, ಮತ್ತೊಂದೆಡೆ ಸೂಡಿಯಲ್ಲಿ ವೀರ ಭದ್ರೇಶ್ವರ ಜಾತ್ರಾ ಮಹೋತ್ಸದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆ ಕಂಡು ಬಂತು.
ಇತಿಹಾಸ ಪ್ರಸಿದ್ಧ ಸೂಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಪ್ರತಿ ವರ್ಷ ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೋದರ ಸಂಭಂಧಿಕರೊಂದಿಗೆ ಹಬ್ಬ ಆಚರಿಸುತ್ತಾರೆ. ದೂರದ ಊರಿನಲ್ಲಿ ನೆಲೆಸಿರುವ ತಮ್ಮ ತಮ್ಮ ಸಂಬಂಧಿಕರನ್ನ ಕರೆದು ಜಾತ್ರೆ ಮಾಡುತ್ತಿದ್ದರು. ಆದ್ರೆ, ಪ್ರಸಕ್ತ ವರ್ಷ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಶ್ರೀ ವಿ ಜಿ ಶೆಟ್ಟರ ಅವರ ನೇತೃತ್ವದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಮೆರವಣಿಗೆಗೆ ಸಕಲ ವಾದ್ಯಗಳೊಂದಿಗೆ 250 ಜನ ಮುತ್ತೈದೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ ಶ್ರೀ ವಿ ಜಿ ಶೆಟ್ಟರ್, ಬಿ ಎಸ್ ಶೀಲವಂತರ್, ಈರಣ್ಣ ಪಟ್ಟಣಶೆಟ್ಟರ್, ನಿಂಗಪ್ಪ ಕಾಶಪ್ಪನವರ್, ರಮೇಶ್ ಗೌಡ ಪಾಟೀಲ್, ಪ್ರಕಾಶ್ ಕುಬಸದ್, ಈಶಣ್ಣ ರೋಣದ್, ಪ್ರಶಾಂತ್ ಸೂಡಿ, ಚನ್ನಪ್ಪ ನೂಲ್ವಿ, ಶಿವಪ್ಪ ಅಮರಗಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment