ಬಂಜಾರ ಸಮುದಾಯ ಈಗಲೂ ಅತ್ಯಂತ ಹಿಂದುಳಿದಿದೆ. ನಮ್ಮ ಸಮಾಜವನ್ನ ರಾಜಕೀಯವಾಗಿ, ಆರ್ಥಿಕವಾಗಿ ಸದೃಢವನ್ನಾಗಿಸಬೇಕಿದೆ ಎಂದು ನಿವೃತ್ತ ಶಿಕ್ಷಕ ತಾರಾಸಿಂಗ್ ರಾಠೋಡ್ ಅಭಿಪ್ರಾಯ ವ್ಯಕ್ತಪಡಿಸಿದರು. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಬಂಜಾರ ಸಮಾಜಕ್ಕೆ ಸಂತ ಸೇವಾಲಾಲರ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಜಾರ ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸೇವಾಲಾಲ್ ಮಹಾರಾಜರು ಒಬ್ಬ ಸಂತ, ದಾರ್ಶನಿಕರಾಗಿದ್ರು. ಸಮಾಜವನ್ನ ಒಂದು ಗೂಡಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಧರ್ಮ ರಕ್ಷಣೆಗಾಗಿ ತಮ್ಮ ಜೀವನವನ್ನೆ ಸವೆಸಿದರು. ಇಂದಿಗೂ ಅವರು ಅಜರಾಮರ ವಾಗಲೂ ಕಾರಣ, ಅವರ ಪರಿಶ್ರಮ, ಅವರ ಕೊಡುಗೆ, ಸಮಾಜದ ಏಳಿಗೆಯನ್ನ ಅವರು ಬಯಸಿದ್ದರು. ಅಂತಹ ಮಹಾನ್ ನಾಯಕನನ್ನ ಬಂಜಾರ ಸಮಾಜದ ಬಾಂಧವರು ಪ್ರತಿದಿನ ನೆನೆಯುತ್ತಾರೆ. ತಮ್ಮ ಗ್ರಾಮದೇವತೆಯೊಂದಿಗೆ ಸೇವಾಲಾಲರ ದೇವಸ್ಥಾನ ನಿರ್ಮಿಸಿ, ಅವರನ್ನ ಪೂಜಿಸುತ್ತಾರೆ. ಇಂದಿಗೂ ನಮ್ಮ ಸಂಸ್ಕೃತಿ, ಪರಂಪರೆ ಎಲ್ಲೆಡೆ ಜೀವಂತವಾಗಿವೆ. ಅದಕ್ಕೆ ಮೂಲ ಕಾರಣ ಸೇವಾಲಾಲ್ ಮಹಾರಾಜರು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಇಂದಿಗೂ ನಾವು ಸಾಗುತ್ತಿದ್ದೇವೆ ಎಂದು ನಿವೃತ್ತ ಶಿಕ್ಷಕ ತಾರಾಸಿಂಗ್ ತಮ್ಮ ಅನಿಸಿಕೆ ಹಂಚಿಕೊಂಡರು.
ಇದೇ ವೇಳೆ ಮಾತನಾಡಿದ ಬಂಜಾರ ಸಮಾಜದ ತಾಲೂಕಾಧ್ಯಕ್ಷ ಲಾಲಪ್ಪ ರಾಠೋಡ್ ಅವರು, ನಾವು ಶಿಕ್ಷಣದಿಂದ ವಂಚಿತರಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಎಲ್ಲರೂ ಉನ್ನತ ಶಿಕ್ಷಣ ನೀಡುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಇನ್ನೂ, ಉಪನ್ಯಾಸ ನೀಡಿದ ಶಿಕ್ಷಕ ಎಸ್.ಕೆ ಪೂಜಾರ್ ಅವರು, ಸಂತ ಸೇವಾಲಾಲರು ಕೇವಲ ಬಂಜಾರ ಸಮಾಜದ ಬಾಂಧವರಿಗೆ ಸಾಕ್ಷಾತ್ ದೇವರು ಹೌದು. ಕಾಡು, ಮೇಡುಗಳಲ್ಲಿ ಜೀವನ ಸಾಗಿಸುತ್ತಿದ್ದ ಜನರು, ತಮ್ಮ ಜೀವನ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸೇವಾಲಾಲ್ ಮಹಾರಾಜರೇ ಕಾರಣ ಎಂದು ಸ್ಮರಿಸಿದರು. ಬಂಜಾರ ಸಮುದಾಯ ಒಂದು ವಿಶಿಷ್ಟ ಸಮುದಾಯ. ಎಲ್ಲ ತರಹದ ಕೆಲಸವನ್ನ ಮಾಡುತ್ತಾರೆ. ಆದರೇ, ಇಂದಿಗೂ ಕಡೆಗಣಿಸಲ್ಪಟ್ಟಿರುವುದು ಬೇಸರದ ಸಂಗತಿ ಎಂದರು.
ಈ ಮಧ್ಯೆ, ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಎ.ಪಿ ಗಾಣಗೇರ್ ಅವರು, ಬಂಜಾರ ಸಮುದಾಯ ಎಲ್ಲರೊಂದಿಗೆ ಬೆರೆಯುತ್ತಾರೆ. ಅವರಲ್ಲಿ ಮೇಲು ಕೀಳು ಎಂಬುದಿಲ್ಲ. ತಮ್ಮಲ್ಲಿ ಭಿನ್ನಾಭಿಪ್ರಾಯ ಬಂದರೂ, ತಮ್ಮ ಸಮಾಜದ ಒಡಕನ್ನೂ ಸಹಿಸುವುದಿಲ್ಲ. ಬಂಜಾರ ಸಮುದಾಯದ ಬಲವೇ ಒಗ್ಗಟ್ಟು ಎಂದರು. ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವುದು ಸುಲಭವಲ್ಲ. ಆದ್ರೆ, ಬಂಜಾರ ಸಮುದಾಯ ಅದೆಲ್ಲವನ್ನ ಉಳಿಸಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಎಸ್.ಎಸ್ ಡೊಳ್ಳಿನ್, ಎ.ಎಸ್. ಕವಡಿಮಟ್ಟಿ, ಶ್ರೀಮತಿ ಭುವನೇಶ್ವರಿ ಅಂಗಡಿ, ಬಿ.ಬಿ. ಕುರಿ, ಆರ್. ಕೆ ಬಾಗವಾನ್, ಆರ್. ಜಿ ಮ್ಯಾಕಲ್,
ಶ್ರೀಮತಿ ಬಿ ಟಿ ಹೊಸಮನಿ, ರಂಗ್ರೆಜಿ, ಆರ್ ಎಸ್ ಇಟಗಿ, ಸಾವಿತ್ರಿ ಪಾಟೀಲ್, ಕುಲಕರ್ಣಿ, ಲಕ್ಷ್ಮಿ ಶಾಬಾದಿ ಮುನವಳ್ಳಿ, ಅಂಗಡಿ, ಸಾಗರ್ ಸ್ವೀಟ್ ಮಾರ್ಟ್ ಮಾಲೀಕರು, ಬಿ ವಿ ನರೇಗಲ್, ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
Post a Comment