ಆಸ್ಪತ್ರೆ ಏಳಿಗೆ ಸಹಿಸದವರಿಂದ ಹುನ್ನಾರ : ಸಾರ್ವಜನಿಕರು
ಕಾರುಡಗಿಮಠ ಆಸ್ಪತ್ರೆ ಉಳಿಸಿಕೊಡಿ ಎಂದು ಸಾರ್ವಜನಿಕರು ಗಜೇಂದ್ರಗಡ ತಹಶಿಲ್ದಾರರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದ ಆಸ್ಪತ್ರೆಯನ್ನ ಹುನ್ನಾರ ನಡೆಸಿ, ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೆಲ್ಲವೂ ಕೊನೆಯಾಗಬೇಕಿದೆ ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಗಮನಿಸಬೇಕಾದ ವಿಷಯವೆಂದರೇ, ಗಜೇಂದ್ರಗಡದಲ್ಲಿ ಕೆಲವು ಪ್ರಕರಣದಲ್ಲಿ ಹಣ ಕೊಟ್ಟರೇ ಸಂಘಟನೆ ಮುಖಂಡರೆ ಬಂದು ಪ್ರಕರಣವನ್ನ ಮುಚ್ಚುತ್ತಾರೆ ಎಂಬ ವಿಷಯ ಪ್ರಸ್ತಾಪಿಸಿದ್ದಾರೆ. ಇದು ಒಂದಲ್ಲ, ಒಂದು ದಿನ ಚರ್ಚೆಯಾಗಬೇಕಾದ ವಿಷಯವೇ ಹೌದು. ಇದು ಗಂಭೀರವಾದ ಆರೋಪವೂ ಹೌದು. ಆಕ್ಸಿಡೆಂಟ್ ಸೇರಿದಂತೆ ಯಾವುದೇ ಘಟನೆಯಲ್ಲಿ ಮೃತ ಪಟ್ಟರೇ, ಅವರನ್ನ ರಕ್ಷಿಸುವ ಕೆಲಸ ನಡೆಯುತ್ತದೆ. ಇದನ್ನೂ, ಗಜೇಂದ್ರಗಡದವರೆಲ್ಲರೂ ಅನುಭವಿಸಿರುತ್ತಾರೆ. ಕೆಲ ಸಂಘಟನೆ ಮುಖಂಡರು ಇದರಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಅವರೇ ಬಂದು ಮೃತ ಪಟ್ಟಿದ್ದಾರೆ. ಆಗಿದ್ದು, ಆಗಿ ಹೋಗಿದೆ. ಈಗ ಅವರಿಂದ ಪರಿಹಾರ ಕೊಡಿಸಿದ್ದೇವೆ ಎಂದು ಸಮಜಾಯಿಸಿ, ನೀಡುತ್ತಾರೆ. ಅಪರಾಧಿಗಳಿಗೆ ಶಿಕ್ಷೆ ಕೊಡುವ ಕಾಯಕ ಗಜೇಂದ್ರಗಡಲ್ಲಿ ಮಾಯವಾಗಿದೆ. ಇದನ್ನೆ ಕೆಲವರು ಕಾಯಕ ಮಾಡಿಕೊಂಡಿದ್ದಾರೆ. ಹೀಗಿರುವಾಗ, ಇದನ್ನೆ ಬಂಡವಾಳ ಮಾಡಿಕೊಂಡು ತಮ್ಮ ಜೀವನ ನಡೆಸಿದ್ದಾರೆ. ಇದನ್ನ ಗಮನಿಸಿ, ಕಾರುಡಗಿಮಠ ಆಸ್ಪತ್ರೆ ಏಳಿಗೆ ಸಹಿಸದವರಿಂದ ಇಂತಹ ಘಟನೆ ನಡೆದಿದೆ. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Post a Comment