-->
Bookmark

Gajendragad : ಮೌಢ್ಯ ತೊಲಗಿಸಿ ಪ್ರಕೃತಿ ರಕ್ಷಿಸಲು ಕರೆ ನೀಡಿ ಸಂತ ಸೇವಾಲಾಲರು

Gajendragad : ಮೌಢ್ಯ ತೊಲಗಿಸಿ ಪ್ರಕೃತಿ ರಕ್ಷಿಸಲು ಕರೆ ನೀಡಿ ಸಂತ ಸೇವಾಲಾಲರು 
---
ಗಜೇಂದ್ರಗಡ: (Feb_15_2024)
ಸಮಾಜದಲ್ಲಿನ ಮೌಢ್ಯ ತೊಲಗಿಸುವಲ್ಲಿ ಮತ್ತು ತಮ್ಮ ವಿಚಾರಗಳ ಮೂಲಕ ಸಮಾಜದ ಅಭಿವೃದ್ಧಿಗೆ ಸಂತ ಸೇವಾಲಾಲರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಾಚಾರ್ಯ ವಸಂತರಾವ್‌ ಗಾರಗಿ ಹೇಳಿದರು.
ಪಟ್ಟಣದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಆಚರಣೆ ಮಾಡಲಾದ ಸಂತ ಶ್ರೀ ಸೇವಾಲಾಲ್‌ ಮಹಾರಾಜರ 285ನೇ ಜಯಂತಿಯಲ್ಲಿ ಮಾತನಾಡಿದರು.
  ಸಂತ ಸೇವಾಲಾಲ ಅವರು ತಮ್ಮ ಜೀವನವನ್ನು ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದರು. ಜತೆಗೆ ಸೇವಾಲಾಲರು ಪ್ರಕೃತಿ ಆರಾಧಕರಾಗಿದ್ದರು. ಪ್ರಕೃತಿಯನ್ನು ಸಂರಕ್ಷಿಸುವ ಕುರಿತು ಅನೇಕ ಸಂದೇಶಗಳನ್ನು ಸಮಾಜಕ್ಕೆ ನೀಡಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ತಮ್ಮ ವಿಚಾರಗಳ ಮೂಲಕ ಸಮಾಜ ಸುಧಾರಣೆಗೆ ಸಂತ ಸೇವಾಲಾಲರು ಶ್ರಮಿಸಿದ್ದು, ಸತ್ಯ, ಅಹಿಂಸೆಗೆ ಹೆಚ್ಚಿನ ಮಹತ್ವ ನೀಡಿ, ವೈವಿಧ್ಯಮಯ ಸಂಸ್ಕೃತಿಯನ್ನು ಬೆಳೆಸಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕಿ ಸಂಗೀತ ನಲವತವಾಡ ಮಾತನಾಡಿ, ಮಹಿಳೆಯರನ್ನು ಸಮಾನತೆಯ ಹಾದಿಗೆ ತಂದು, ಮೌಢ್ಯದಲ್ಲಿ ಮುಳುಗಿ ಹೋಗಿದ್ದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸಂತ ಸೇವಾಲಾಲರ ಪಾತ್ರ ಅಪಾರವಾದದ್ದು ಎಂದು ಹೇಳಿದರು. 
ಈ ವೇಳೆ ಉಪನ್ಯಾಸಕರಾದ ರವಿ ಹಲಗಿ, ಬಸವರಾಜ ಸಂಕದಾಳ, ಮನೋಜ ಕಲಾಲ, ಪಿ. ವೈ. ಹೊಂಬಳ, ಶಿವಾನಂದ ಹಳ್ಳದ ಇದ್ದರು.
Post a Comment

Post a Comment