ರಾಜಕೀಯ ಎಂಬುದು ಕಪ್ಪು ವರ್ತುಲ. ಆ ಕಪ್ಪು ವರರ್ತುಲವನ್ನ ಬಿಳಿ ವರ್ತುಲವನ್ನಾಗಿಸುವ ಅಗತ್ಯ ವಿದೆ ಎಂದು ನಿವೃತ್ತ ಶಿಕ್ಷಕ ತಾರಾಸಿಂಗ್ ರಾಠೋಡ್ ಹೇಳಿದರು. ಕಾಲಕಾಲೇಶ್ವರದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಜೀವನ ರೂಪಿಸಿದ್ದಾಯ್ತು. ಈಗ ಸಮಾಜದ ಅಂಕುಡೊಂಕುಗಳನ್ನ ತಿದ್ದುವ ಅಗತ್ಯ ವಿದೆ ಎಂದು ರಾಜಕೀಯ ಇಂಗಿತವನ್ನ ವ್ಯಕ್ತಪಡಿಸಿದರು. ಯುವ ಸಮೂಹಕ್ಕೆ ಉದ್ಯೋಗ ನೀಡಬೇಕು. ಮಾನುಷ್ಯ ಜೀವನದಲ್ಲಿ ಹೋರಾಟ ನಡೆಸಿ, ಸೋತಾಗ ಅನ್ಯ ಮಾರ್ಗ ಹಿಡಿಯುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದರು.
ಮಕ್ಕಳಿಂದ ಅನ್ನ ತಿಂದಿದಿನಿ ಅವರ ಋಣ ತಿರಿಸಲಾಗದು. ಈ ಊರಿನ ಎಲ್ಲರ ಮನೆಯ ಸದಸ್ಯನಾಗಿದ್ದೇ. ಊರಿನ ಎಲ್ಲರೂ ನನಗೆ ಪರಿಚಯ. ಶಿಕ್ಷಕ ವೃತ್ತಿ ಸಂತೃಪ್ತಿ ಇದೆ. ವಿದ್ಯಾರ್ಥಿಗಳು ಸರ್ ಅಂತಾ ಬಂದು ಮಾತನಾಡಿಸಿದಾಗ ಸಿಗುವ ಸಂತೋಷ ಅಷ್ಟಿಷ್ಟಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಇದೇ ವೇಳೆ, ಕೆಲವರು ಪ್ರಶಸ್ತಿಗೋಸ್ಕರ ಅರ್ಜಿ ಸಲ್ಲಿಸುತ್ತಾರೆ, ಆದ್ರೆ, ನಾನು
ಪ್ರಶಸ್ತಿಗೋಸ್ಕರ ಅರ್ಜಿ ಸಲ್ಲಿಸಿದವನಲ್ಲ. ಮಕ್ಕಳ ಕಲಿಕೆಯೇ ನನಗೆ ರಾಷ್ಟ್ರ ಪ್ರಶಸ್ತಿ ಎಂದು ಮಕ್ಕಳ ಶ್ರೇಯೋಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಕ್ಷಾತ್ ಕಾಲಕಾಲೇಶ್ವರ ಸನ್ನಿಧಿಯಲ್ಲಿ ಕೆಲಸ ಸಿಕಗಕಿದ್ದು ಸಂತಸ. ನಾನು ವಿದ್ಯಾರ್ಥಿಗಳನ್ನ ಜಾತ್ಯಾತೀತವಾಗಿಸಿದ್ದೇನೆ. ನಾನು ಮಾಡಿದ ಒಳ್ಳೆ ಕೆಲಸದಿಂದ ನನ್ನ ಮಕ್ಕಳಿಗೆ ಒಳ್ಳೆಯದಾಗಿದೆ ಎಂದು ತಿಳಿಸಿದರು. ಇನ್ನೂ, ರಾಜಕೀಯದಿಂದ ಬಂದ ಸಮಸ್ಯೆಗಳನ್ನ ಕೆಚ್ಚೆದೆಯಿಂದ ಎದುರಿಸಿದ್ದನ್ನು ಸ್ಮರಿಸಿದರು.
ಕಾಲಕಾಲೇಶ್ವರಕ್ಕೆ ಮೊರಾರ್ಜಿ ದೇಸಾಯಿ ಸ್ಕೂಲ್ ಬಂದಿದ್ದು ಒಂದು ಪವಾಡವೇ ಸರಿ ಎನ್ನುತ್ತ ಗ್ರಾಮಸ್ಥರೊಂದಿಗೆ ಪಟ್ಟ ಶ್ರಮವನ್ನ ಸಹ ನೆನೆದರು.
ಭೈರಾಪುರ ಗ್ರಾಮದಲ್ಲಿ ಶಾಲೆ ಇರಲಿಲ್ಲ. ಬ್ಲಾಕ್ ಬೋರ್ಡ್ ಹೊತ್ತೊಯ್ದು, ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡಿದ್ದೇನೆ. ಕಾಲಕಾಲೇಶ್ವರ, ಭೈರಾಪುರ, ನಾಗರಸಕೊಪ್ಪದಲ್ಲಿ ಶಾಲೆ ಆರಂಭ ಮಾಡಿದ್ದ ದಿನಗಳನ್ನ ನೆನೆದರು.
ಬೀದರೂರ್ ಶ್ರೀಶೈಲಪ್ಪ ಅವರೊಂದಿಗೆ ತಾಲೂಕಾಧಿಕಾರಿಗಳು, ಶಶಿಧರ್ ಹೂಗಾರ್ ಅವರು ತಮ್ಮೊಂದಿಗೆ ಎಲ್ಲ ಕೆಲಸಕ್ಕೂ ಸಹಕರಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ಸ್ನೇಹವನ್ನು ಸಹ ಮೆಲುಕು ಹಾಕಿದರು.
ಊರಿನಲ್ಲಿನ ಜನರಿಗೆ ತೊಂದರೆಯಾದಾಗ ಅವರಿಗೆ ಗುಳಿಗೆ ಔಷಧಗಳನ್ನ ನೀಡಿದ್ದೇನೆ ಎನ್ನುತ್ತ, ವೃತ್ತಿ ಜೀವನ ಯಶಸ್ಸಿಗೆ ಧರ್ಮ ಪತ್ನಿ ಪಾತ್ರವೂ ಮಹತ್ವದ್ದಾಗಿತ್ತು. ಧರ್ಮ ಪತ್ನಿ ನಿರಂತರವಾಗಿ 35 ವರ್ಷ ವೃತ್ತಿ ಜೀವನದಲ್ಲಿ ನಿರಂತರ ಶ್ರಮ ಪಟ್ಟಿದ್ದಾರೆ ಎಂದು ತಮ್ಮ ಶ್ರೀಮತಿಯವರ ಪಾತ್ರವನ್ನು ನೆನೆದರು.
ಇಂದಿನ ಜಗತ್ತಿನಲ್ಲಿ ಸಮಾಜವನ್ನ ತಿದ್ದುವ ಅಗತ್ಯ ಇದೆ. ಬದುಕು ಹೋರಾಟವಾಗಿದೆ. ಆದ್ರೆ, ಜೀವನ ಕೊನೆಯಾಗುತ್ತಿರುವುದು ಅನಾಥರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಯುವಕರಿಗೆ ಉದ್ಯೋಗವನ್ನ ನೀಡಬೇಕಿದೆ. ಮಾನವ ಸೋತಾಗ ಅನ್ಯ ಮಾರ್ಗಕ್ಕೆ ಹೋಗಬಾರದು ಎಂದು ತಿಳಿಸಿದರು. ಇಂದಿನ ಯುಗದಲ್ಲೂ, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತ, ಶಶಿಧರ್ ಹೂಗಾರ್ ಮಾತನಾಡಿ, ತಾರಾಸಿಂಗ್ ಗುರುಗಳು ಮಕ್ಕಳ ಜೀವನ ರೂಪಿಸಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ಮಕ್ಕಳೆ ಧನ್ಯರು. ಅವರು ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮಕ್ಕಳು ಶಾಲೆಗೆ ಬರುತ್ತಿದ್ದರು. ಒಂದು ಕೈಯಲ್ಲಿ ಕೋಲು ಮತ್ತೊಂದು ಕೈಯಲ್ಲಿ ಸೀಟಿ ಹಿಡಿದು ಊರಿನ ಪ್ರದಕ್ಷಿಣೆ ಹಾಕುತ್ತಿದ್ದರು. ಇದರಿಂದ ಗ್ರಾಮದಲ್ಲಿ ಕಲಿಯುವ ವಾತಾವರಣ ಸೃಷ್ಟಿಯಾಯ್ತು. ನಿಮ್ಮಂತಹ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರಾದ ಶಶಿಧರ್ ಹೂಗಾರ್ ಹೇಳಿದರು.
ಸಮಾಜಕ್ಕೆ ನಿಮ್ಮಂತಹ ವ್ಯಕ್ತಿಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು. ನಿಮ್ಮ ಸಮಾಜ ಸೇವೆಗೆ ನಾವು ಕೈ ಜೋಡಿಸುತ್ತೇವೆ ಎಂದು ನಿವೃತ್ತಿ ಜೀವನದ ಶುಭ ಹಾರೈಕೆ ತಿಳಿಸಿದರು.
ಇದೇ ವೇಳೆ, ಗ್ರಾಮಸ್ಥರು ಮತ್ತು ತಾರಾಸಿಂಗ್ ಅವರು ಕಲಿಸಿದ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಸನ್ಮಾನ ಕಾರ್ಯಕ್ರಮದಲ್ಲಿ ಶಶಿಧರ್ ಹೂಗಾರ್, ಶಿವಯ್ಯ ಹಿರೇಮಠ, ವೀರೇಶ್ ರಾಠೋಡ್, ಮುತ್ತಪ್ಪ ಕನ್ಯಾಳ, ರಮೇಶ್ ಪೂಜಾರ್, ಶ್ರೀಮತಿ ಶೈಲಜಾ ಚಿಲಝರಿ, ಕಳಕಪ್ಪ ಹೂಗಾರ್, ಅಶೋಕ್ ತಳವಾರ್, ರಾಜೇಂದ್ರಸ್ವಾಮಿ ಹಿರೇಮಠ, ಮಲ್ಲಪ್ಪ ಪೂಜಾರ್, ದುಗ್ಗಪ್ಪ ಬಜಂತ್ರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಕಳಕಪ್ಪ ತಳವಾರ್, ರಂಗಪ್ಪ ಚವ್ಹಾಣ್, ಮಂಜುನಾಥ್ ಪೂಜಾರ್, ನೀಲಪ್ಪ ಕೆಂಪನಾಳ್, ರಾಜಣ್ಣ ಹಿರೇಮಠ್, ನೀಲಪ್ಪ ಮಲ್ಲಪ್ಪ ಕೆಂಪನಾಳ್, ಶ್ರೀಧರ್ ಮ್ಯಾಗೇರಿ, ರುದ್ರಪ್ಪ ಚವ್ಹಾಣ್, ಸೇರುದಂತೆ ಕಾಲಕಾಲೇಶ್ವರ ಗ್ರಾಮಸ್ಥರು ಸನ್ಮಾನಿಸಿದರು.
ಗ್ರಾಮಸ್ಥರು ಸನ್ಮಾನಿಸಿ, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
Post a Comment