ಸಮೀಪದ ರಾಜೂರ ಗ್ರಾಮದ ಬೀರಲಿಂಗೇಶ್ವರ ಗುಡಿ ಆವರಣದಲ್ಲಿ ಶನಿವಾರ ಸಂಜೆ ೫ಕ್ಕೆ ‘ಸಂಗಾತ ಪುಸ್ತಕ’ ಪ್ರಕಾಶನ ಪ್ರಕಟಿಸಿರುವ ಡಾ. ಐ.ಜೆ.ಮ್ಯಾಗೇರಿಯವರ ‘ಜೈಲ್ ಡೈರಿ’ (ಕೈದಿಗಳ ನೈಜ ಕಥನ) ಮತ್ತು ಟಿ.ಎಸ್.ಗೊರವರ ಅವರ ‘ಮಲ್ಲಿಗೆ ಹೂವಿನ ಸಖ ಮತ್ತು ಚವರಿ’ (ಎರಡು ನಾಟಕಗಳು) ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಕನ್ನಡ ವಿಶ್ವವಿದ್ಯಾಲಯ, ಹಂಪಿಯ ನಿವೃತ್ತ ಪ್ರಾಧ್ಯಾಪಕರಾದ ರಹಮತ್ ತರೀಕೆರೆ ಕೃತಿಗಳನ್ನು ಲೋಕಾರ್ಪಣೆಗೊಳಿಸುವರು. ಭಾಷಾಂತರ ನಿರ್ದೇಶನಾಲಯದ ನಿವೃತ್ತ ನಿರ್ದೇಶಕರಾದ ಈರಪ್ಪ ಎಂ.ಕAಬಳಿ ‘ಜೈಲ್ ಡೈರಿ’, ಕವಯತ್ರಿ ಜಹಾನ್‌ಅರಾ ಕೋಳೂರು ‘ಮಲ್ಲಿಗೆ ಹೂವಿನ ಸಖ ಮತ್ತು ಚವರಿ’ ಕೃತಿಗಳ ಅವಲೋಕನ ಮಾಡುವರು.
ರಂಗ ಕಲಾವಿದ ವಿಜಯ ಕಮಾಟ್ರ, ಕವಿ ಮೌನೇಶ್ ನವಲಹಳ್ಳಿ ಕೃತಿಗಳ ಆಯ್ದ ಭಾಗಗಳನ್ನು ವಾಚನ ಮಾಡುವರು. ಮುಖ್ಯ ಅತಿಥಿಗಳಾಗಿ ವಿಜಯಪುರ ಕೇಂದ್ರ ಕಾರಾಗೃಹದ ಮನೋವೈದ್ಯಾಧಿಕಾರಿಗಳಾದ ಡಾ.ನಿರಂಜನ ಇಟ್ಟಣ್ಣನವರ, ಸಾಹಿತಿ ಬಿ.ಎ.ಕೆಂಚರೆಡ್ಡಿ, ವ್ಹಿ.ಎಸ್.ಕೋರಿ, ಬನ್ನೆಪ್ಪ ಗೂಳಿ, ರಾಮಚಂದ್ರ ಹುದ್ದಾರ, ಕೆ.ಎಚ್.ಮುಜಾವರ, ವ್ಹಿ.ಬಿ.ಹಪ್ಪಳದ, ಎಫ್.ಡಿ.ಕಟ್ಟಿಮನಿ, ಜಿ.ಎಸ್.ಕುಲಕರ್ಣಿ, ಬಾಬು ಮುಜಾವರ, ಎಸ್.ಐ.ಕೋರಿ, ಎಸ್.ಎಚ್.ಹಾದಿಮನಿ, ಎಂ.ಎಸ್.ಹಾದಿಮನಿ ಪಾಲ್ಗೊಳ್ಳುವರು ಎಂದು ಪ್ರಕಾಶಕ ಟಿ.ಎಸ್.ಗೊರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment