ಕುಂಟೋಜಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಪೋನವ್ವ ನೇಮಪ್ಪ ರಾಠೋಡ ಹಾಗೂ ಉಪಾಧ್ಯಕ್ಷೆಯಾಗಿ ಚನ್ನವ್ವ ಯಂಕಪ್ಪ ಅಜಮೀರ ಆಯ್ಕೆಯಾದರು.
ಕುಂಟೋಜಿ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 13 ಸದಸ್ಯರ ಪೈಕಿ ಪೋನವ್ವ ನೇಮಪ್ಪ ರಾಠೋಡ ಅವರಿಗೆ 10 ಮತಗಳು ಬಿದ್ದರೆ, ಪ್ರತಿಸ್ಪರ್ಧಿ ದ್ಯಾಮವ್ವ ಹನಮಂತ ರಾಠೋಡ ಅವರಿಗೆ 3 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚನ್ನವ್ವ ಯಂಕಪ್ಪ ಅಜಮೀರ್ ಅವರು 8 ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಲಿಂಬಣ್ಣ ಮುನಿಯಪ್ಪ ಲಮಾಣಿ ಅವರು 5 ಮತಗಳನ್ನು ಪಡೆದರು. ಚುನಾವಣಾಧಿಕಾರಿ ಡಾ.ಡಿ. ಮೋಹನ್ ಆಯ್ಕೆ ಘೋಷಿಸಿದರು.
ಕೊನೆ ಕ್ಷಣದ ವರೆಗೂ ಬಹಳ ಕುತುಹಲ ಕೆರಳಿಸಿದ್ದ ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆ ಕೊನೆಗೆ ಯಾವುದೇ ಅಡೆ ತಡೆ ಇಲ್ಲದೇ ನಡೆಯಿತು. ಪೂನವ್ವ ರಾಠೋಡ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಖನಿಜ ನಿಗಮ ಮಂಡಳಿ ಅಧ್ಯಕ್ಷರಾದ ಜಿ.ಎಸ್.ಪಾಟೀಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Post a Comment