ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದ ನಿರಂತರ ದಾಸೋಹ ಮತ್ತು ಕಲಾಪೋಷಕರ ಮಠದ ಶ್ರೀ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ- ಶ್ರೀಸಿದ್ಧಶ್ರೀ ರಾಷ್ಟ್ರೀಯ ಉತ್ಸವ-೨೦೨೪ ಜನೇವರಿ ೧೪,೧೫,೧೬ ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ. ಶ್ರೀಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನಚಿತ್ರ ಕಲಾವಿದ ಶೋಭರಾಜರಿಗೆ ನೀಡಲಾಗುತ್ತಿದೆ ಎಂದು ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಅವರು ಸಿದ್ಧನಕೊಳ್ಳದ ಮಠದದಲ್ಲಿ ಜಾತ್ರಾಮಹೋತ್ಸವ ನಿಮಿತ್ಯ ನಡೆದ ಸುದ್ದಿ ಗೋಷ್ಠಿಯಲ್ಲಿ ಮೂರು ದಿನಗಳ ಕಾಲ ನಡೆವ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಬೆಂಗಳೂರಿನ ಡಾ. ಆರ್.ಎಸ್.ರಾಜು ಹೆಲಿಕಪ್ಟರ್ ಮೂಲಕ ರಥದ ಮೇಲೆ ಹೂಮಳೆಗರೆಯಲಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ,ಕೆಪಿಸಿಸಿ ಪ್ರ.ಕಾರ್ಯದರ್ಶಿ ವೀಣಾ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಿ.೧೫ರಂದು ಚಲನಚಿತ್ರೋತ್ಸವವನ್ನು ಸಚಿವ ಶಿವರಾಜ ತಂಗಡಗಿ , ಮಾಜಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶಾಸಕ ಕಾಶಪ್ಪನವರ ದಂಪತಿ,ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಇದು ಭಕ್ತರಮಠ. ಇಲ್ಲಿ ಬರುವವರೆಲ್ಲರೂ ಸಿದ್ಧಪ್ಪಜ್ಜನ ಭಕ್ತರೇ. ಜಾತಿ, ಧರ್ಮ, ಮೇಲು-ಕೀಳು, ರಾಜಕೀಯ ಇಲ್ಲಿ ಇಲ್ಲ , ಪ್ರಸಕ್ತ ವರ್ಷ ಶ್ರೀ ಸಿದ್ಧಶ್ರೀ ರಾಷ್ಟೀಯ ಪ್ರಶಸ್ತಿಯನ್ನು ೭೦೦ಕ್ಕೂ ಮಿಕ್ಕಿ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಮನಗೆದ್ದಿರುವ ಹೆಸರಾಂತ ಚಲನಚಿತ್ರ ನಟ ಶೋಭರಾಜರಿಗೆ ನೀಡಲಾಗುತ್ತಿದೆ. ರಾಜ್ಯ, ಹೊರರಾಜ್ಯದ ಹೆಸರಾಂತ ಕಲಾವಿದರು, ಜೊತೆಗೆ ನಮ್ಮ ಭಾಗದ ಪ್ರತಿಭೆಗಳೂ ಮನರಂಜನೆ ,ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನೀಡಲಿದ್ದಾರೆ, ಇಪ್ಪತ್ತಕ್ಕೂ ಹೆಚ್ಚು ಚಲನಚಿತ್ರ ,ಕಿರುಚಿತ್ರಗಳ ಹಾಡು, ಟೀಸರ್ಗಳು ಬಿಡುಗಡೆಯಾಗಲಿವೆ. ಆ ಚಿತ್ರಗಳ ನಟರು, ತಂಡಗಳವರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರನಿರ್ಮಾಪಕ ಘನಶ್ಯಾಮ ಬಾಂಡಗೆ, ಸಂಗಮೇಶ ಹುದ್ದಾರ, ಚಲನಚಿತ್ರೋತ್ಸವ ಸಮಿತಿ ಸಂಚಾಲಕ ಡಾ.ಪ್ರಭು ಗಂಜಿಹಾಳ, ರಾಜುಗೌಡ ನಾಡಗೌಡ, ಕಲಾವಿದರಾದ ವೀರೇಶ (ಪುರವಂತರ)ಐಹೊಳ್ಳಿ , ಸಂಗನಗೌಡ ಕುರುಡಗಿ,ಮಂಜುಳಾ ರೇವಡಿ, ರೇಣುಕಾ ಬಗಲಿ ಮೊದಲಾದವರು ಉಪಸ್ಥಿತರಿದ್ದರು.
**
ವರದಿ-
ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬.
Post a Comment