ಎಲ್ಲರೂ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ, ಸ್ನೇಹಿತರಿಗೆ ಪಾರ್ಟಿ ಕೊಟ್ಟು ಸಂಭ್ರಮಿಸುವವರೆ ಜಾಸ್ತಿ. ಹೀಗಿರುವಾಗ ಶಿಕ್ಷಕರಾದ ಡಾ. ಸಂಗಮೇಶ್ ತಮ್ಮನಗೌಡ್ರ ಅವರ ಸುಪುತ್ರಿ ಸಜನ್ಯ ಅವರು 24ನೇ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದರು.
ತಂದೆ ಹೊತ್ತಿಗೆಗಳನ್ನ ಹೆಗಲ ಮೇಲೆ ಹೊತ್ತು ತಾವೇ ಪುಸ್ತಕಗಳನ್ನ ಹಂಚುತ್ತಾರೆ. ಅವರ ಆಶ್ರಯದಲ್ಲಿ ಬೆಳೆದ ಸೌಜನ್ಯ ಅವರು, ಬಡವರು, ಎಂದರೆ ಪ್ರೀತಿ, ವಾತ್ಸಲ್ಯ... ಪುಟ್ಟಮಕ್ಕಳಿಗೆ ಸದಾ ಏನಾದರೊಂದು ಕೊಡುವ ಮನಸ್ಸು ಅವರದ್ದು...
ಇನ್ನೂ, ತಂದೆ ಯೊಡನೆ ಹೆಗಲಿಗೆ ಹೆಗಲು ಕೊಟ್ಟು ಸದಾ ಅವರೊಂದಿಗೆ ಸಾಗುವ ಇವರು, ಬಡವರ ಸೇವೆಗಾಗಿ ಬಲಿಸುತ್ತಾರೆ. ಸ್ವಲ್ಪ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಇಂದಿನ ಯುಗದಲ್ಲಿ ಸುದ್ದಿ ಬೇಡ ಎನ್ನುವ ಇವರ ಮನಸ್ಸು ಪರಿಶುದ್ಧವಾದದ್ದು ಎಂದರೆ ತಪ್ಪಾಗಲ್ಲ. ಬಿ.ಎ.ಎಂ.ಎಸ್ ಮುಗಿಸಿರುವ ಇವರು, ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಮೂಲತಃ ಲಕ್ಷ್ಮೇಶ್ವರದವರಾದ ಇವರು, ಚಿಕ್ಕಂದಿನಿಂದಲೇ ವಿದ್ಯಾಬ್ಯಾಸದಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ ಸೌಜನ್ಯ...
ಇದೇ ರೀತಿ ಸೌಜನ್ಯ ತಮ್ಮ ಹುಟ್ಟುಹಬ್ಬವನ್ನ ಆಚರಿಸಿ, ಇನ್ನಷ್ಟು ಸಮಾಜಸೇವೆ ಮಾಡಲಿ ಎಂಬುದು ಕಿರಾ ನ್ಯೂಸ್ ಕನ್ನಡ ತಂಡದ ಆಶಯ... ಅವರ ಕನಸುಗಳು ಈಡೇರಲಿ, ಇನ್ನಷ್ಟು ಯಶಸ್ಸು ಅವರದ್ದಾಗಲಿ, ಭಗವಂತ ಆರೋಗ್ಯ, ಐಶ್ವರ್ಯ ದಯಪಾಲಿಸಲಿ... ಮತ್ತೊಮ್ಮೆ ಡಾ. ಸೌಜನ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು...
Post a Comment