ಗಜೇಂದ್ರಗಡದ ಬೀದಿ ವ್ಯಾಪಾರಸ್ಥರು ತಹಶಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಹಶಿಲ್ದಾರ್ ಕಚೇರಿ ಎದುರು ಅಂಗಡಿಗಳನ್ನ ಇಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಹಿಂದೆ ಅಂಗಡಿಗಳನ್ನ ತುಸು ಹಿಂದಕ್ಕೆ ತಗೊಳ್ಳಿ ಎಂದು ಹೇಳಿದ್ದಕ್ಕೆ ತಹಶಿಲ್ದಾರ್ ಅವರನ್ನ ಬೀದಿಬದಿ ವ್ಯಾಪಾರಸ್ಥರು ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ ಎಂಬುದು ಒಂದೆಡೆಯಾದ್ರೆ, ಮತ್ತೊಂದೆಡೆ, ಪಾರ್ಕಿಂಗ್ ಸಮಸ್ಯೆಯೂ ತಲೆ ದೂರಿದೆ. ಈ ಮಧ್ಯೆ ಹಬ್ಬಹರಿದಿನಗಳಲ್ಲಿ ರಸ್ತೆ ಮೇಲೆ ವ್ಯಾಪಾರ ಮಾಡುವಾಗ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಜೊತೆಗೆ ಪೊಲೀಸರು ಬಂದಾಗ ಅವರೊಂದಿಗೂ ವಾಗ್ವಾದ ನಡೆದ ಅದೆಷ್ಟೋ ಉದಾಹರಣೆಗಳಿವೆ. ಭಾನುವಾರ ಬೆಳ್ಳಂಬೆಳಿಗ್ಗೆ ಜೆಸಿಬಿಯೊಂದಿಗೆ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ವು. ಸೋಮವಾರದ ವರೆಗೆ ಗಡುವು ನೀಡಲಾಗಿತ್ತು. ಮಂಗಳವಾರ ಮತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋಮವಾರ ನಮಗೆ ಸಂಬಂಧವೇ ಇಲ್ಲದಂತೆ ನಟಿಸಿದ್ದ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನ ತೆರವು ಮಾಡಿದ್ದೆ ತಡ ಅವರು, ಪ್ರತಿಭಟನೆ ನಡೆಸುತ್ತಿದ್ದಾರೆ.
ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂದು ಹೇಳಿಕೊಳ್ಳುವ ಪ್ರತಿಷ್ಠಿತರೇ ಒಂದಲ್ಲ ಎರಡೆರಡು ಅಂಗಡಿಗಳನ್ನ ಹಾಕಿ ಅವರು ಬಾಡಿಗೆ ಪಡೆಯುತ್ತಾರೆ. ಪುರಸಭೆಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಗಳ ಅಂಗಡಿಗಳು ತಲೆ ಎತ್ತಿದ್ದು, ಅವರು ಪ್ರತಿ ದಿನ ಎರಡು ನೂರರಿಂದ ಮೂರು ನೂರು ರೂಪಾಯಿ ವಸೂಲಿ ಮಾಡುತ್ತಾರೆ. ಉತ್ತರ ಭಾರತದಿಂದ ವಲಸೆ ಬಂದ ಕೆಲ ಪಾನಿಪುರಿ ಮಾರುವವರು ಸಹ ಪ್ರತಿದಿನ ನೂರಾರೂ ರೂಪಾಯಿ ಬಾಡಿಗೆ ಕೊಡಬೇಕು. ಇದೆಲ್ಲ ಧಂದೆ ಖುಲ್ಲಂ ಖುಲ್ಲಾ ನಡೆಯುತ್ತಿದೆ. ಕೆಲ ದೊಡ್ಡ ವ್ಯಾಪಾರಸ್ಥರು ಮತ್ತು ಕೆಲ ಪ್ರತಿಷ್ಠಿತರು ಇದರಲ್ಲಿ ಶಾಮಿಲಾಗಿದ್ದಾರೆ ಎಂಬುದು ಗಮನಾರ್ಹ.
ಪ್ರತಿಬಾರಿ ಪೊಲೀಸರಿಗೆ ಗುರಿ ಮಾಡುವ ಇವರು ಬಡ ವ್ತಾಪಾರಸ್ಥರಿಂದ ಪ್ರತಿದಿನ ನೂರಾರು ರೂಪಾಯಿ ಪೀಕುತ್ತಾರೆ. ಇನ್ನೂ, ಕೆಲವರು ತಮಗೆ ಸಂಬಂಧ ಪಡದೆ ಇದ್ದರೂ, ತಮ್ಮ ಅಂಗಡಿ ಮುಂದೆ ಇಟ್ಟಿದ್ದೀರಿ ಅದಿಕ್ಕೆ ಬಾಡಿಗೆ ಕೊಡಿ ಎಂದು ವಸೂಲಿ ಮಾಡುವುದು ಗಜೇಂದ್ರಗಡದಲ್ಲಿ ಕಾಮನ್...
ಇದೆಲ್ಲವನ್ನ ನೋಡಿಕೊಂಡು ಸುಮ್ಮನಿರಾಲಗದು, ಕೆಕೆ ಸರ್ಕಲ್ ನಲ್ಲಿ ಮೂತ್ರ ವಿರ್ಜನೆಗೆ ಹೊಗುವಾಗ ವಾಹನಗಳನ್ನ ಎಲ್ಲಿ ನಿಲ್ಲಿಸಬೇಕೆಂದು ತಿಳಿಯುವುದಿಲ್ಲ. ಸಮಸ್ಯೆಗಳನ್ನ ನೋಡಿಯೂ ನೊಡದಂತೆ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳ ಕಾರ್ಯ ಮೆಚ್ಚಬೇಕು.
ಆದ್ರೆ, ನಿಜವಾದ ಬೀದಿ ವ್ಯಾಪಾರಸ್ಥರಿಗೆ ಅನ್ಯಾಯವಾಗಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಾರ್ಯ ತಹಶಿಲ್ದಾರ್ ಕಾರ್ಯಾಲಯ ಮತ್ತು ಪುರಸಭೆ ಮಾಡಬೇಕಿದೆ.
ವ್ಯಾಪಾರಸ್ಥರಿಗೆ ಒಂದು ಸೂಕ್ತ ಮಾರುಕಟ್ಟೆ ಬೇಕಾಗಿದೆ. ಬೀದಿಬದಿ ವ್ಯಾಪಾರಸ್ಥರನ್ನ ಒಕ್ಕಲೆಬ್ಬಿಸುವ ಕಾರ್ಯ ಸರಿಯಾದುದಲ್ಲ. ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.
ಇನ್ನೂ, ಕೆಲ ಅಂಗಡಿ ಮಾಲೀರಕರು ಎರಡು ಮೂರು ಅಂಗಡಿಗಳನ್ನ ಇಟ್ಟಿರುವುದನ್ನ ತೆರವು ಗೊಳಿಸಲೆಬೇಕಿದೆ.
ಸಂಪಾದಕರು ಕಿರಾ ನ್ಯಸ್, ಕನ್ನಡ.
Post a Comment