ಕುಂಟೋಜಿ ಗ್ರಾಮಕ್ಕೆ ಹೋಗುವಾಗ ಬೆಣಚಮಟ್ಟಿ ಕ್ರಾಸ್ ಸಮೀಪದಲ್ಲಿ ಇರುವ ಮೋಕಾ ಎಂಬ ಮನೆಗಳ ಸುತ್ತಲೂ ಚಿರತೆ ಕುರುಹುಗಳು ಕಂಡುಬಂದಿವೆ
ಇಲ್ಲಿ ಭೋಜಪ್ಪ ರಾಠೋಡ, ಹಂಪಣ್ಣ ರಾಠೋಡ, ಭೀಮಪ್ಪ ರಾಠೋಡ, ಕುಮಾರ ರಾಠೋಡ ಎನ್ನುವರ ಮನೆಗಳು ಇವೆ. ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬ ಸಹಿತವಾಗಿ ಇಲ್ಲಿಯೇ ವಾಸ ಮಾಡುತ್ತಾರೆ. ಇವರ ಜೊತೆಯಲ್ಲಿ ಕುರಿಗಳ ಹಿಂಡು, ದನದ ಹಿಂಡು ಹಾಗೂ ಟಗರಿನ ಸಾಕಾಣಿಕೆ ಮತ್ತು ನಾಯಿಗಳು ಇವೆ.
ಗುರುವಾರ ರಾತ್ರಿ ಚಿರತೆ ಶಬ್ದಕ್ಕೆ ಕುರಿಗಳು, ನಾಯಿಗಳು ಹಾಗೂ ದನಕರುಗಳು ಜೋರಾಗಿ ಕಿರುಚಲು ಆರಂಭಿಸಿವೆ. ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ಓಡಿ ಹೋಗಿ ಗಿಡ ಏರಿದೆ. ನಂತರ ಶುಕ್ರವಾರ ಬೆಳಿಗ್ಗೆ ಎದ್ದು ಚಿಕ್ಕ ಮಕ್ಕಳು ಬಯಲು ಶೌಚಕ್ಕೆ ಹೋದ ಸಂದರ್ಭದಲ್ಲಿ ಪೊದೆಯಲ್ಲಿ ಚಿರತೆ ಇರುವುದನ್ನು ನೋಡಿ ಹಾಗೂ ಅದರ ಶಬ್ದಕ್ಕೆ ಭಯಗೊಂಡು ಮನೆ ಕಡೆಗೆ ಅಳುತ್ತಾ ಬಂದಿದ್ದಾರೆ. ನಂತರ ಎಲ್ಲರೂ ಸೇರಿ ಪೊದೆಯ ಕಡೆ ಹೋಗಿ ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ. ಇವರೆಲ್ಲರೂ ಜೋರಾಗಿ ಕೂಗಿದಾಗ ಚಿರತೆ ಮತ್ತೇ ಗಿಡವೇರಿದೆ ಹಾಗೂ ಅಲ್ಲಿಂದ ಗುಡ್ಡದ ಕಡೆಯ ಪೊದೆಯಲ್ಲಿ ಹೋಗಿದೆ.
ಇದರಿಂದ ಭಯಗೊಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿದಾಗ. ಬಂದೂಕು ಸಮೇತ ಬಂದಿದ್ದ ಅರಣ್ಯ ಅಧಿಕಾರಿಗಳು ಚಿರತೆ ಓಡಾಡಿದ ಹೆಜ್ಜೆ ಗುರುತು ಹಾಗೂ ಅದರ ಇಕ್ಕಿಯನ್ನು ಗುರುತಿಸಿದ್ದಾರೆ. ಅಷ್ಟೇ ಅಲ್ಲದೆ ಗಿಡ ಏರುವಾಗ ಅದರ ಉಗುರಿನ ಗುರುತುಗಳನ್ನು ಚಿರತೆಯದ್ದೇ ಎಂದು ಧೃಡಪಡಿಸಿದ್ದಾರೆ.
ಗುರುವಾರ ಸಂಜೆ ವರೆಗೂ ಅಲ್ಲಿನ ಪೊದೆ ಹಾಗೂ ಗುಡ್ಡಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದ್ದಾರೆ. ಆದರೆ ಚಿರತೆ ಪತ್ತೆಯಾಗಿಲ್ಲ.
ಸಂಜೆ ವೇಳೆ ಎರಡೂ ಮೂರು ಕಡೆಗಳಲ್ಲಿ ಗುಂಡು ಹಾರಿಸಿ ಚಿರತೆ ಇದರ ವಾಸನೆಗೆ ಬರುವುದಿಲ್ಲ ಎಂದು ನಿವಾಸಿಗಳಿಗೆ ಸಮಜಾಯಿಷಿ ಹೋಗಿದ್ದಾರೆ.
ಆದರೆ ಚಿರತೆ ಒಡಾಟದ ಕುರಿತು ನಿಖರವಾದ ಮಾಹಿತಿ ದೊರೆತ ನಂತರವೂ ನಿರ್ಲಕ್ಷ್ಯ ತೋರಿದ್ದಾರೆ. ಅದನ್ನು ಹಿಡಿಯಲು ಮುಂದಾಗಿಲ್ಲ ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ನಿವಾಸಿ ಕುರಿಗಾಯಿ ಭೋಜಪ್ಪ ರಾಠೋಡ ತಿಳಿಸಿದರು.
Post a Comment