-->
Bookmark

Gajendragad :ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ ಸಾಹಿತಿ : ಬೆಳತನಕ ಬೇಂದ್ರೆ ಕಾರ್ಯಕ್ರಮಕ್ಕೆ ಸಾಹಿತಿ ಆರ್. ಕೆ ಬಾಗವಾನ್

Gajendragad : ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ ಸಾಹಿತಿ : ಬೆಳತನಕ ಬೇಂದ್ರೆ ಕಾರ್ಯಕ್ರಮಕ್ಕೆ ಸಾಹಿತಿ ಆರ್. ಕೆ ಬಾಗವಾನ್ 
ಗಜೇಂದ್ರಗಡ : (Jan_26_2024)

ಸಾಹಿತಿ, ಶಿಕ್ಷಕ ಆರ್.ಕೆ ಬಾಗವಾನ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನ ಮೂಡಿಸಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯ ವಿರಲಿ. ಅವರು ಅಲ್ಲಿ ಇರಲೇಬೇಕು, ಅಂದಾಗ ಮಾತ್ರ ಆ ಕಾರ್ಯಕ್ರಮಕ್ಕೊಂದು ಮೆರುಗು. 
ಇದೇ ಜನೇವರಿ 27 ರಂದು ಬೆಂಗಳೂರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಬೆಳತನಕ ಬೇಂದ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಗಜೇಂದ್ರಗಡದ ಕೀರ್ತಿ ಹೆಚ್ಚಿಸಿದ್ದಾರೆ. 

ಆರ್.ಕೆ. ಬಾಗವಾನ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಕನ್ನಡಾಂಬೇಯ ಸೇವೆ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಟಚ್ಚುಕಟ್ಟಾದ ಬರವಣಿಗೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನೂ, ಕಥೆ, ಕವನ ಬರೆಯುವ ಇವರು ಗೋಗೇರಿ ಗ್ರಾಮದ ಪ್ರತಿಭೆ. 
ಬೆಂಗಳೂರಿನಲ್ಲಿ ಜನೇವರಿ 27 ರ ರಾತ್ರಿ 9.30 ರಿಂದ ಬೆಳಗ್ಗೆ 6 ಗಂಟೆ ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತದಿಂದ ಸಾಹಿತಿಗಳು ಆಗಮಿಸಲಿದ್ದಾರೆ. ಚೇತನ ಫೌಂಡೇಶನ್ ಕರ್ನಾಟಕ, ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರ ನೇತೃತ್ವದಲ್ಲಿ ಬೆಳತನಕ ಬೇಂದ್ರೆ ಕಾರ್ಯಕ್ರಮ ನಡೆಯಲಿದೆ.
Post a Comment

Post a Comment