ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾನ ನಡೆಯುತ್ತಿದ್ದರೇ, ಇತ್ತ, ಶ್ರೀ ಆಂಜನೇಯ ಭಜನಾ ಮಂಡಳಿ ಅಧ್ಯಕ್ಷ ಹನುಮಂತ ಕೆಂಚಿ ಅವರ ಮನೆಯಲ್ಲಿ ರಾಮ ನಾಮ ಸ್ಮರಣೆ ನಡೆಯಿತು. ದೇಶಾದ್ಯಂತ ನಡೆದ ರಾಮನಾಮ ಜಪ ಪಟ್ಟಣದಲ್ಲೂ ಕಂಡು ಬಂತು. ಶ್ರೀ ಆಂಜನೇಯ ಭಜನಾ ಮಂಡಳಿ ಮತ್ತು ಶ್ರೀ ಪದ್ಮಾವತಿ ಭಜನಾ ಮಂಡಳಿಯ ಸದಸ್ಯರು ಒಂದೆಡೆ ಸೇರಿ ಶ್ರೀ ರಾಮನ್ನ ಭುವಿಗೆ ಆಹ್ವಾನಿಸಿದರು. ಕರುನಾಡಿಗೆ ಖ್ಯಾತಗಾಯಕರನ್ನ ನೀಡಿದ ಕೊಡುಗೆ ಶ್ರೀ ಆಂಜನೇಯ ಭಜನಾ ಮಂಡಳಿಗೆ ಸಲ್ಲುತ್ತದೆ. ಭಕ್ತಿ ಪರಂಪರೆ ಕಡಿಮೆ ಯಾಗುತ್ತಿರುವ ಇಂದಿನ ಯುಗದಲ್ಲಿ ಸಂಸ್ಕೃತಿ, ಪರಂಪರೆಯನ್ನ ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದಾರೆ. ಇದು ಗಜೇಂದ್ರಗಡದ ಕೀರ್ತಿ ಹೆಚ್ಚುವಂತೆ ಮಾಡಿದೆ. ಕ್ರಿಕೆಟ್, ಫುಟ್ಬಾಲ್ ಅಥವಾ ಇನ್ನಾವುದೇ ಕ್ರೀಡೆ ಇರಲಿ, ಮಕ್ಕಳೊಂದಿಗೆ ಮೈದಾನಕ್ಕಳಿಯುವ ಪರಂಪರೆ ಇದೆ. ಯಾಕೆ ಅಂದ್ರೆ, ಕ್ರೀಡೆಯನ್ನ ಹೊಸ ಪೀಳಿಗೆಗೂ ಪರಿಚಯಿಸುವ ಪರಿಕಲ್ಪನೆಯಾಗಿದೆ. ಅದೇ ರೀತಿ, ಶ್ರೀ ಆಂಜನೇಯ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ಹನುಮಂತ ಕೆಂಚಿ ಅವರ ಮಾರ್ಗದರ್ಶನದಲ್ಲಿ ಪದ್ಮಾವತಿ ಭಜನಾ ಮಂಡಳಿಯೊಂದಿಗೆ ಮಕ್ಕಳನ್ನ ಕರೆದೊಯ್ಯುವ ಸಂಸ್ಕೃತಿ, ಪರಂಪರೆ ಇದೆ. ಇದು ಮುಂದಿನ ಪೀಳಿಗೆಗೂ ಆಧ್ಯಾತ್ಮಿಕತೆ ಉಳಿಸಿ, ಬೆಳೆಯಲು ಅನುಕೂಲ ಎಂಬ ಮಾತನ್ನ ಈ ಹಿಂದೆಯೂ ಶ್ರೀ ಆಂಜನೇಯ ಭಜನಾ ಮಂಡಳಿ ಅಧ್ಯಕ್ಷರಾದ ಹನುಮಂತ ಕೆಂಚಿ ಸಾರ್ವಜನಿಕವಾಗಿ ಹೇಳಿದ್ದು, ಈಗ ಇತಿಹಾಸ. ಇದು, ಒಪ್ಪುವ ವಿಷಯವೂ ಹೌದು. ಕೇವಲ ರಾಮ ಜನ್ಮ ಭೂಮಿಯಲ್ಲಿ ಮಾತ್ರ ರಾಮನಿಲ್ಲ. ನಾವು ಮಾಡುವ ಒಳ್ಳೆಕಾರ್ಯದಲ್ಲಿ, ಒಳ್ಳೆಯ ವಿಚಾರದಲ್ಲಿ, ನಡೆ, ನುಡಿಯಲ್ಲೂ ರಾಮನನ್ನ ಕಾಣಬೇಕು. ರಾಮನನ್ನ ಕೇವಲ ಪೂಜಿಸುವುದು ಮಾತ್ರವಲ್ಲ, ರಾಮನನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ರಾಮರಾಜ್ಯವಾಗಲಿದೆ ಎಂದು ಶ್ರೀ ಆಂಜನೇಯ ಭಜನಾ ಮಂಡಳಿ ಅಧ್ಯಕ್ಷರಾದ ಹನುಮಂತ ಕೆಂಚಿ ಹೇಳಿದ್ದಾರೆ.
ಹಿರಿಯರು, .ಹಿಳೆಯರು, ಯುವಕ, ಯುವತಿಯರು ಮಕ್ಕಳಾದಿಯಾಗಿ ಎಲ್ಲರೂ ಸೇರಿ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ರಾಮನಾಪ ಜಪಿಸಿದರು. ಬಳಿಕ ಪ್ರಸಾದ ವ್ಯವಸ್ಥೆಯೂ ಮಾಡಲಾಗಿತ್ತು.
ಇನ್ನೂ, ಮೊಬೈನ್ ಹಾವಳಿ ಮತ್ತು ದುಶ್ಚಟದ ಹಾವಳಿಗೆ ಬಲಿಯಾಗುತ್ತಿರುವ ಯುವ ಪೀಳಿಗೆಯನ್ನ ಆಧ್ಯಾತ್ಮಿಕದತ್ತ ಸೆಳೆಯುತ್ತಿರುವುದು ಎಲ್ಲರ ಮೆಚ್ಚುಗೆಗೆ ಮಾತ್ರವಾಗಿದೆ. ಶ್ರೀ ಆಂಜನೇಯ ಭಜನಾ ಮಂಡಳಿ ಮತ್ತು ಶ್ರೀ ಪದ್ಮಾವತಿ ಭಜನಾ ಮಂಡಳಿ ಕಾರ್ಯವನ್ನ ಸಾರ್ವಜನಿಕರು ಶ್ಲಾಘಿಸಿದ್ದಾರೆ.
Post a Comment