ಗಜೇಂದ್ರಗಡ : ( Jan_21_2024)
ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದರೇ, ಗಜೇಂದ್ರಗಡದಲ್ಲಿ ಯುವಕನೋರ್ವ ಸೊಸಿಯಲ್ ಮಿಡಿಯಾದಲ್ಲಿ (Face book ) ರಾಮ ಮಂದಿರದ ಮೇಲೆ ಹಸಿರು ಧ್ವಜ ಹಾಕಿರುವ ಪೋಸ್ಟ್ ಮಾಡಿದ್ದಾನೆ.
ತೌಜುದ್ದೀನ್ ದಫೇದಾರ್ ಎಂಬ ಯುವಕನನ್ನ ವಶಕ್ಕೆ ಪಡೆಯಲಾಗಿದೆ.
ಎಫ್. ಐ.ಆರ್. ದಾಖಲಿಸಿ ಎಂದು ಭಜರಂಗದಳ ಸೇರಿದಂತೆ ವಿವಿಧ ಸಂಘಟನೆಯಿಂದ ಯುವಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ, ಪೊಲೀಸ್ ಠಾಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ಆರೋಪಿಸಿದರು. ಅಲ್ಲದೇ, ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಒಂದು ದಿನ ಮುಂಚೆ ಇಂತಹ ಘಟನೆ ನಡೆದಿದ್ದು, ಕೋಟ್ಯಾಂತರ ಹಿಂದು ಭಾವನೆಗಳಿಗೆ ಧಕ್ಕೆ ಎಂದು ಹಿಂದು ಯುವಕರು ಆರೋಪಿಸಿದರು.
ಆರೋಪಿಯು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಮೂಲಗಳು ತಿಳಿಸಿವೆ.
ಅದೇನೆ ಇರಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕಿಡಗೇಡಿಗಳಿಗೆ ತಕ್ಕ ಪಾಠ ಕಲಿಸಬೆಕಿದೆ.
Post a Comment