-->
Bookmark

Gajendragad : ಜನೇವರಿ 23 ರಂದು ದಿ. ಶ್ರೀಮತಿ ತುಳಜಾಬಾಯಿ ಲಾಲಪ್ಪ ರಾಠೋಡ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ

Gajendragad : ದಿ. ಶ್ರೀಮತಿ ತುಳಜಾಬಾಯಿ ಲಾಲಪ್ಪ ರಾಠೋಡ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಗಜೇಂದ್ರಗಡ : (Jan_20_2024)

ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರಾದ ದಿ. ಶ್ರೀಮತಿ ತುಳಜಾಬಾಯಿ ಲಾಲಪ್ಪ ರಾಠೋಡ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಡೆಯಲಿದೆ. ಜನೇವರಿ 23 ರಂದು ಬಂಜಾರ ಸಮುದಾಯದ ರೋಣ ಮತ್ತು ಗಜೇಂದ್ರಗಡ ತಾಲೂಕಾ ಅಧ್ಯಕ್ಷರು ಮತ್ತು ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಗಣ್ಯವ್ಯಾಪಾರಸ್ಥರ, ಬಂಜಾರ ಸಮುದಾಯದ ಹಿರಿಯ ಮುಖಂಡರೂ ಆದ, ಶ್ರೀ ಲಾಲಪ್ಪ ರಾಠೋಡ್ ಅವರ ಬಸವೇಶ್ವರ ನಗರದ, ಶ್ರೀ ತುಳಜಾ‌ ಭವಾನಿ ಶಾಲೆ ಹಿಂದುಗಡೆ ಇರುವ ತೋಟದ ಮನೆಯಲ್ಲಿ ನೆರವೇರಲಿದೆ. ಸಕಲ ಬಂಧು ಭಾಂಧವರು ಬಂದು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. 
ಬಂಜಾರ ಸಮಯದಾಯದ ಪ್ರತಿಷ್ಠಿತ ಕುಟುಂಬ ವಾಗಿರುವುದರಿಂದ ಸಮುದಾಯಕ್ಕೆ ಮತ್ತು ಗಜೇಂದ್ರಗಡ ಸುತ್ತಮುತ್ತಲ ಗ್ರಾಮಕ್ಕೆ ಚಿರ ಪರಿಚಿತರಾಗಿದ್ದಾರೆ. ಸಮಾಜ ಸೇವಕರು, ಹಿರಿಯ ಚಿಂತಕರು, ಕೃಷಿಕರು ಆಗಿರುವ ಶ್ರೀ ಲಾಲಪ್ಪ ರಾಠೋಡ್ ಅವರ ಧರ್ಮಪತ್ನಿಯವರಾದ ದಿ. ಶ್ರೀಮತಿ ತುಳಜಾಬಾಯಿ ಲಾಲಪ್ಪ ರಾಠೋಡ್ ಅವರ ಪುಣ್ಯ ಸ್ಮರಣೆಯಲ್ಲಿ ಎಲ್ಲರೂ ಬಂದು ಭಾಗವಹಿಸಿ ಎಂದು ಮನವಿ ಮಾಡಿದ್ದಾರೆ.
Post a Comment

Post a Comment