ಗಜೇಂದ್ರಗಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೫ ರಲ್ಲಿ ಶಾಲೆಯ ಸುತ್ತಮುತ್ತಲೂ ಹಾಗೂ ಆವರಣದಲ್ಲಿ ಅವ್ಯವಸ್ಥಿತೆಯ ಕುರಿತಂತೆ, ಅಡುಗೆ ಕೊಠಡಿ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದಂತೆ DYFI ಮುಖಂಡ ದಾವಲಸಾಬ ತಾಳಿಕೋಟಿ ನೀಡಿದ ದೂರಿನ ಬೆನ್ನಲ್ಲೇ ರೋಣ ತಾಲೂಕಿನ ಕ್ಷೇತ್ರಶಿಕ್ಷಾಧಿಕಾರಿ ಆರ್.ಎನ್.ಹುರಳಿ ಸ್ಥಳಕ್ಕೆ ಭೇಟಿ ನೀಡಿದರು.
ಬಳಿಕ ಮಾತನಾಡಿ ಈ ಶಾಲೆಯ ಬಗ್ಗೆ ವರದಿ ಬೆನ್ನಲ್ಲೇ ಬೇಟಿ ನೀಡಿದ್ದೇನೆ. ಶಾಲೆಯಲ್ಲಿನ ಅವ್ಯವಸ್ಥಿತಯ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದು, ಶಾಲೆಯಲ್ಲಿನ ಕೆಲ ಶಿಕ್ಷಕಿಯರ ವರ್ಗಾವಣೆಗೆ ಮನವಿ ಬಂದಿದ್ದು ಅದನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಅವ್ಯವಸ್ಥಿತೆಯ ಕುರಿತು ಶೀಘ್ರದಲ್ಲಿಯೇ ಶಾಲಾ ಮೂಲಭೂತ ಸೌಕರ್ಯಗಳನ್ನು ಬಗೆ ಹರಿಸುತ್ತೇನೆ ಎಂದರು.
ಬಳಿಕ DYFI ಮುಖಂಡ ದಾವಲಸಾಬ ತಾಳಿಕೋಟಿ ಮಾತನಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕೆಲ ಶಿಕ್ಷಕಿ ಯರುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದೆ ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅಂತಹವರನ್ನು ವರ್ಗಾವಣೆ ಮಾಡಬೇಕು ಹಾಗೂ ಶಾಲೆಗೆ ಬೇಕಾದ ಮೂಲ ಸೌಕರ್ಯ ಒದಗಿಸಬೇಕೆಂದು ಬಿಇಓಗೆ ಮನವಿ ಸಲ್ಲಿಸಲಾಗಿದೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಬಿ.ಆರ್.ಸಿ., ಸಿ.ಆರ್.ಪಿ., ಅಕ್ಷರ ದಾಸೋಹ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.
Post a Comment