ಜನೇವರಿ 13 ರ ಬೆಳಗ್ಗೆ 10 ಗಂಟೆಗೆ ಅಕ್ಷರವೆಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಜನೇವರಿ 13 ಮಧ್ಯಾಹ್ನ 2.30ಕ್ಕೆ
ಪೂಜ್ಯ ಹಿರಿಯ ಅನ್ನದಾನ ಮಹಾಶಿವಯೋಗಿಗಳ ಪೂಜ್ಯ ಅಙಿನವ ಅನ್ನದಾನ ಮಹಾಶಿವಯೋಗಿಗಳ ಸಂಸ್ಮರಣೆಯಲ್ಲಿ ಅಕ್ಷರ 24ಕ್ಕೆ ಚಾಲನೆ, ಸಂಜೆ 6 ಗಂಟೆಗೆ ಬಿ ಪ್ರಾಣೇಶ್ ತಂಡದಿಂದ ಹಾಸ್ಯ ಸಂಜೆ ನಡೆಯಲಿದೆ. ಇನ್ನೂ, ಜನೇವರಿ 14 ರ ಸಂಜೆ 5 ಗಂಟೆಗೆ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವ ಇದ್ದು, 13 ಮತ್ತು 14 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಸಮೂಹ ಸಂಸ್ಥೆಗಳಿಂದ ಹಲವಾರು ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಜನಜಾಗೃತಿ ಜನೋಪಯೋಗಿ ಕಾರ್ಯಕ್ರಮಗಳು ನಡೆಯಲಿದೆ ಎಲ್ಲರೂ ಅಕ್ಷರ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಸಿ ಯಶಸ್ವಿಗೊಳಿಸಿ ಎಂದು ಅನ್ನದಾನ ಕಾಲೆಜಿನ ಐಟಿಐ ಪ್ರಿನ್ಸಿಪಲ್ ಎ.ಪಿ ಗಾಣಗೇರ್ ಹೇಳಿದರು.
ಗಜೇಂದ್ರಗಡ ಪುರ್ತಗೇರಿ ಕ್ರಾಸ್ ನಲ್ಲಿರುವ ಅನ್ನದಾನೇಶ್ವರ ಕಾಲೇಜಿನಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಹಾಜಾತ್ರೆ ನಡೆಯಲಿದೆ. ಬಡವರಿಗೆ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಆರಂಭಿಸಿದ್ದು, ಕಲಿಕೆ ಎಂಬುದು ನಿರಂತರ ಅದಕ್ಕೆ ಕೊನೆ ಎಂಬುದೇ ಇಲ್ಲ. ಗೋವುಗಳ ರಕ್ಷಣೆಗೆ ಹಾಲಕೆರೆ ಮಠ ಮುಂದಾಗಿದ್ದು, ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಎ.ಪಿ ಗಾಣಗೇರ್ ಮಾಹಿತಿ ನೀಡಿದರು. ಭೂಮಿಯ ರಕ್ಷಣೆ, ರೈತರಿಗೆ ಸಾವಯವ ಗೊಬ್ಬರದ ಮಹತ್ವ ಸಾರುವ ಉದ್ದೇಶವೂ ಇದೆ ಎಂದು ತಿಳಿಸಿದರು. ಅಕ್ಷರ ಎಂದರೇ ಕೇವಲ ಅಕ್ಷರ ಕಲಿಕೆ ಅಷ್ಟೇ ಅಲ್ಲ. ಜೀವನದಲ್ಲಿ ಸುಖ ದುಃಖದೊಂದಿಗೆ ಬಾಳುವುದು ಸಹ ಕಲಿಕೆ. ಮತ್ತೊಬ್ಬರೊಂದಿಗೆ ಹೇಗೆ ಮಾತಾಡಬೇಕೆಂದು ಸಹ ಕಲಿಕೆ. ಜ್ಞಾನಾರ್ಜನೆ ಎನ್ನುವುದು ನಿರಂತರ ಎಂದು ಎ.ಪಿ ಗಾಣಗೇರ್ ಅಭಿಪ್ರಾಯ ಪಟ್ಟರು.
ಗ್ರಾಮೀಣ ಜನರ ಅನುಕೂಲಕ್ಕಾಗಿ ಪ್ರಸಕ್ತ ವರ್ಷದಿಂದ ಕುಸುರಿ ಕೆಲಸ ಮರೆಯಾಗುತ್ತಿದೆ. ಅದು ನಮ್ಮ ಸಂಸ್ಕೃತಿ ಪರಂಪರೆಯಾಗಿದ್ದು, ಇಂತಹ ಕಲೆಯನ್ನ ಉಳಿಸಿ, ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸುಜಾತಾ ಪೂಜಾರ ಮಾಹಿತಿ ನೀಡಿದರು.
ಬಿಬಿ ಸೂಡಿ, ಬಿ.ಎಂ. ಸಾಲಿಮಠ, ಕೆ.ಎಸ್ ತೋಟದ್, ಎಸ್ ಬಿ ಬಿಜಕಲ್, ಎಸ್. ವಿ ಕುಂಬಾರ್, ಎಂ.ಎಸ್ ಹೊಂಬಳ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment