ಡಿಎಂಸಿ ಪ್ರೊಡಕ್ಷನ್ ಲಾಂಛನದಲ್ಲಿ ಟಿ ಎಮ್ ಸೋಮರಾಜು ರವರ ನಿರ್ಮಾಣದ ‘ಲೇಡಿಸ್ ಬಾರ್’ ಹೀಗೊಂದು ಸಿನಿಮಾ ಸಿದ್ಧವಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.
ಇತ್ತೀಚಿಗೆ ಯೂಟ್ಯೂಬ್ ಸಿರಿ ಮ್ಯೂಸಿಕ್ ಚಾನೆಲ್ ನಲ್ಲಿ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು ಎಲ್ಲರ ನಿದ್ದೆಗೆಡಿಸಿ ಸದ್ದು ಮಾಡುತ್ತಿವೆ. ‘ಲೇಡೀಸ್ ಬಾರ್’ ಶೀರ್ಷಿಕೆ ಕೇಳಿದಾಕ್ಷಣ , ಇದು ಕುಡಿತದ ಸಿನಿಮಾ ಅಂದುಕೊಳ್ಳುವುದು ಸಹಜ, ಆದರೆ ಈ ಚಿತ್ರದಲ್ಲಿ, ಬರಿ ಕುಡಿಯೋದನ್ನೇ ತೋರಿಸಿಲ್ಲ, ಅದರಿಂದ ಜೀವನದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆಯೂ ಸಮಾಜಕ್ಕೆ ಉತ್ತಮ ಸಂದೇಶವನ್ನು ಹೇಳುವ ಪ್ರಯತ್ನವನ್ನು ಮಾಡಲಾಗಿದೆ.
ನಿರ್ದೇಶಕ ಎ ಎನ್ ಮುತ್ತು ಅವರು ಹೇಳಿದ ಕಥೆ ನನಗೆ ತುಂಬಾ ಇಷ್ಟವಾಯಿತು . ಸಮಾಜಕ್ಕೆ ಒಂದೊಳ್ಳೆ ಸಂದೇಶ ಇರುವ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಬಂಡವಾಳ ಹೂಡಿದ್ದೇನೆ ಹಾಗೂ ಒಂದು ಪ್ರಮುಖ ಪಾತ್ರದಲ್ಲಿ ನಟನೆ ಕೂಡ ಮಾಡಿದ್ದೇನೆಂದು ನಿರ್ಮಾಪಕ ಸೋಮರಾಜ್ ಹೇಳಿದರು.
ಛಾಯಾಗ್ರಹಣ ವಿನಸ್ ಮೂರ್ತಿ, ಹರ್ಷ ಕೋಗೋಡ್‌ರವರ ಸಂಗೀತ, ಮನ್ವರ್ಷಿ ನವಲಗುಂದ, ಶ್ರೀ ತೇಜ್. ರಾಜು ಚಿತ್ರಪುರ ಅವರ ಸಾಹಿತ್ಯವಿದ್ದು ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ನೃತ್ಯ ನಿರ್ದೇಶಕ ಜಗ್ಗು, ಸಂಕಲನ ಶಿವರಾಜ್ ಮೇವು, ಸಾಹಸ ನಿರ್ದೇಶನ ಚಂದ್ರು ಬಂಡೆ ಅವರದಿದೆ. ಚಿತ್ರದಲ್ಲಿ ಕಲಾವಿದರಾದ ಹರೀಶ್ ರಾಜ್, ಕೆಂಪೇಗೌಡ, ಚಿಲ್ಲರ್ ಮಂಜು, ಸೀತಾರಾಮ್, ಕುರಿರಂಗ, ಚೈತ್ರ ಗೌಡ, ಶಿವಾನಿ ಗೌಡ, ಗಣೇಶ್ ರಾವ್ ಕೇಸರಕರ್ ಮುಂತಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಪಿಆರ್ ಓ ಸುಧೀಂದ್ರ ವೆಂಕಟೇಶ್ ,ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಚಿತ್ರಕ್ಕೆ ಎಸ್ ಎನ್ ರಾಜಶೇಖರ್ ಸಹ ನಿರ್ಮಾಪಕರಾಗಿದ್ದಾರೆ.ಎ ಎನ್ ಮುತ್ತು ರವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನದಲ್ಲಿ ತೆರೆಗೆ ಬರುವ ಈ ಚಿತ್ರದ ನಿರ್ದೇಶಕರು ಬಾಗಲಕೋಟ ಜಿಲ್ಲೆಯವರೆಂಬುದು ವಿಶೇಷವಾಗಿದೆ.
**
ವರದಿ:
ಡಾ.ಪ್ರಭು ಗಂಜಿಹಾಳ
ಮೊ;೯೪೪೮೭೭೫೩೪೬
Post a Comment