-->
Bookmark

Naregal : ಉಚಿತ ಸಾಮೂಹಿಕ ವಿವಾಹ ನೋಂದಣಿಗೆ ಆಹ್ವಾನ, ಕಾರ್ಮಿಕರಿಗಾಗಿ ನರೇಗಲ್ಲನಲ್ಲಿ ಉಚಿತ ಮದುವೆ ಆಯೋಜನೆ

                  ಸಾಂಧರ್ಭಿಕ ಚಿತ್ರ 
Naregal : ಉಚಿತ ಸಾಮೂಹಿಕ ವಿವಾಹ ನೋಂದಣಿಗೆ ಆಹ್ವಾನ
ಕಾರ್ಮಿಕರಿಗಾಗಿ ನರೇಗಲ್ಲನಲ್ಲಿ ಉಚಿತ ಮದುವೆ ಆಯೋಜನೆ  

ನರೇಗಲ್ಲ: (Dec_08_2023

ಪಟ್ಟಣದ ಚಂದ್ರಮೌಳೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಂತೋಷ ಮಣ್ಣೋಡ್ಡರ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು. ಕಟ್ಟಡ ಕಾರ್ಮಿಕರು ಹಾಗೂ ಇತರೇ ವರ್ಗದ ಕಾರ್ಮಿಕರು ಅದರಲ್ಲೂ ಕಾರ್ಮಿಕ ಕಾರ್ಡ್‌ ಹೊಂದಿರುವ ಯುವಕ-ಯುವತಿಯರಿಗೆ ಮಾತ್ರ  ಉಚಿತ ಮದುವೆಯನ್ನು ಮಾಡಿಕೊಡಲಾಗುತ್ತದೆ. ಇದು ನಮ್ಮ ಸಂಘದ ಆಶ್ರಯದಲ್ಲಿ ನರೇಗಲ್‌ ಪಟ್ಟಣದಲ್ಲಿ ಆಯೋಜನೆ ಮಾಡುತ್ತಿರುವ ಎರಡನೇ ಸಾಮೂಹಿಕ ವಿವಾಹವಾಗಿದೆ ಎಂದರು.
ಕಾರ್ಮಿಕ ಕಾರ್ಡ್‌ ಹೊಂದಿರುವ ಶ್ರಮಿಕರಿಗಾಗಿ ಈ ಬಾರಿಯ ನಡೆಯುತ್ತಿರುವ ಸಾಮೂಹಿಕ ಮದುವೆಯನ್ನು ಜನವರಿ 6ಕ್ಕೆ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.  ಇದರಲ್ಲಿ ಎರಡನೇ ಮದುವೆಗೆ ಹಾಗೂ ಬಾಲ್ಯ ವಿವಾಹಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
           ಆಸಕ್ತ ಕಾರ್ಮಿಕರು ತಮ್ಮ ಕಾರ್ಮಿಕ ಕಾರ್ಡಿನ ಪ್ರತಿ, ಆಧಾರ್‌ ಕಾರ್ಡ್‌, ಜನನ ಪ್ರಮಾಣ ಪತ್ರ, ಶಾಲಾ ಧೃಡಿಕರಣ ದಾಖಲೆಗಳ ಪ್ರತಿಯೊಂದಿಗೆ ನಾಲ್ಕು ಪಾಸ್‌ ಪೋರ್ಟ್‌ ಸೈಜ್‌ ಫೋಟೋಗಳನ್ನು ತಂದು ನರೇಗಲ್‌ ಪಟ್ಟಣದ ಅಬ್ಬಿಗೇರಿ ರಸ್ತೆಯ ಮಾರ್ದಲ್ಲಿ ಕೃಷಿ ಇಲಾಖೆಯ ಎದುರಿನಲ್ಲಿರುವ ಕಾರ್ಮಿಕ ಕಚೇರಿಗೆ ಡಿಸೆಂಬರ್‌ 30 ರ ಒಳಗೆ ತಲುಪಿಸಬೇಕು. ತಡವಾಗಿ ಬಂದವರಿಗೆ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸದವರಿಗೆ ಅವಕಾಶ ನೀಡುವುದಿಲ್ಲ ಎಂದರು.
ಹೆಚ್ಚಿನ ಮಾಹಿತಿಗಾಗಿ ಸಂತೋಷ ಮಣ್ಣೋಡ್ಡರ 9535365676, ಸೋಮಪ್ಪ ಹನಮಸಾಗರ  9964053467 ಈ ಮೊಬೈಲ್‌ ಸಂಖ್ಯೆಗಳಿಗೆ ಸಂಪರ್ಕ ಮಾಡಬಹುದು ತಿಳಿಸಿದರು.
Post a Comment

Post a Comment