ಗದಗ ಜಿಲ್ಲೆಯ ನರೇಗಲ್ ಹೋಬಳಿಯ ಪತ್ರಿಕಾ ವರದಿಗಾರ ನಿಂಗಪ್ಪ ಮಡಿವಾಳರ (43) ಬುಧವಾರ ಬೆಳಿಗ್ಗೆ ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ. ಮೃತ ನಿಂಗಪ್ಪನವರು ಅನೇಕ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಬೇರೆ, ಬೇರೆ ಪ್ರಾದೇಶಿಕ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಉತ್ತರಪ್ರಭಾ ಪತ್ರಿಕೆಯು ಆರಂಭವಾದ ದಿನಗಳಿಂದ ಇಲ್ಲಿಯವರೆಗೂ ಒಂದೇ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ.
ಬುಧವಾರ ಬೆಳಿಗ್ಗೆ ಕಫಾ ಆಗಿದೆ, ಉಸಿರಾಟಕ್ಕೆ ತೊಂದರೆ ಹಾಗೂ ಸುತ್ತು ಕಾಣಿಸಿಕೊಂಡಿದೆ ಎಂದು ಸ್ಥಳೀಯ ಆಸ್ಪತ್ರೆಗೆ ಸ್ನೇಹಿತರ ಜೊತೆಯಲ್ಲಿ ಹೋಗಿದ್ದಾರೆ. ವೈದ್ಯರ ಸಲಹೆ ಮೇರೆ ಗದಗ ನಗರಕ್ಕೆ ತುರ್ತು ಚಿಕಿತ್ಸೆಗೆ ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಗದಗ ನಗರದ ಜರ್ಮನ್ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ ಎಂದು ತಿಳಿಸಲು ದುಃಖವೆನಿಸುತ್ತದೆ.
ಸದ ಹಸನ್ಮುಖಿಯಾಗಿದ್ದ ನಿಂಗಪ್ಪನವರಿಗೆ ಮೂವರು ಮಕ್ಕಳಿದ್ದಾರೆ.ಅವು ಪುಟ್ಟ ಪುಟ್ಟ ಒಂದು ಗಂಡು, ಎರಡು ಹೆಣ್ಣು. ಈಚೆಗೆ ಅವರ ಪತ್ನಿ ಮೂರನೆ ಮಗುವಿಗೆ ಜನ್ಮ ನೀಡಿದ್ದಾಳೆ. ಅಂದಾಜು ಒಂದು ತಿಂಗಳಷ್ಟೇ ಆಗಿದೆ. ಮನೆಯಲ್ಲಿ ಹಾಸಿಗೆ ಹಿಡಿದಿರುವ ವೃದ್ದ ತಾಯಿ, ಹೊರಗಿನ ಪ್ರಪಂಚ ಗೊತ್ತಿಲ್ಲದ ಓರ್ವ ಅಣ್ಣ ಹಾಗೂ ಇಬ್ಬರೂ ಅಕ್ಕಂದಿರನ್ನು ಬಿಟ್ಟು ಅಗಲಿದ್ದಾರೆ.
ಸಾಮಾಜಿಕ ಕಳಕಳಿಯ ಉತ್ತಮ ಲೇಖನಗಳನ್ನು ಬರೆದು ಹಾಗೂ ಊರಿನ ಜನರ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದದ್ದ ನಿಂಗಪ್ಪನ ಅಗಲಿಕ ಪತ್ರಿಕೆ ಹಾಗೂ ನರೇಗಲ್, ಗಜೇಂದ್ರಗಡ ತಾಲ್ಲೂಕು ಮತ್ತು ಗದಗ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ.
ಭಾರದ ಮನಸ್ಸಿಂದ ಸ್ನೇಹಿತ, ಸಹದ್ಯೋಗಿ ನಿಂಗಪ್ಪ ಮಡಿವಾಳರ ಅವರಿಗೆ ʼಓಂ ಶಾಂತಿʼ ಎನ್ನುತ್ತಿದ್ದೇವೆ.
ಕ್ರೂರಿ ದೇವರು ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವೆ
---
ನರೇಗಲ್ ಹೋಬಳಿ ಪತ್ರಿಕಾ ಬಳಗ, ಗದಗ ಜಿಲ್ಲೆ
Post a Comment