ಪ್ರಸಕ್ತ ಸರ್ಕಾರ ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ ಇದು ಸಂತಸದ ವಿಷಯ ಎಂದು ಕೆಪಿಸಿಸಿ ಪದವಿಧರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್. ಎಂ ಕುಬೇರಪ್ಪನವರು ಅಭಿಪ್ರಾಯ ಪಟ್ಟರು. ಧಾರವಾಡ ಜಿಲ್ಲೆ ಹುಬ್ಬಳ್ಳಿಯಲ್ಲಿ ಜಿಗಳೂರು ಮಲ್ಲಿಕಾರ್ಜುನ್ ಮೆಮೋರಿಯಲ್ ಸ್ವರ್ಣ ಭವನ ಮತ್ತು ಪತ್ರಕರ್ತರ ಸಂಘದಲ್ಲಿ ರಾಜ್ಯ ಮಟ್ಟದ ಲೇಖಕಿಯರ 7ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಆದ್ಯತೆ ನೀಡುವ ಸರ್ಕಾರ ಆಡಳಿತ ನಡೆಸುತ್ತಿದೆ. ಮಹಿಳೆಯರಿಗೆ ಆದ್ಯತೆ ನೀಡಿದಾಗ ರಾಮ ರಾಜ್ಯದ ಕನಸು ಈಡೇರಲಿದೆ ಎಂದು ತಿಳಿಸಿದರು.
ಇದೇ ವೇಳೆ, ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಮಹಿಳೆಯರ ವಿಚಾರ ಶಕ್ತಿಯೂ ಬದಲಾಗುತ್ತಿದೆ. Joint Family ಯಲ್ಲಿ ಕೂಡಿ ಬಾಳಲು ಮಹಿಳೆಯರು ಇಚ್ಛಿಸುತ್ತಿಲ್ಲ. Individual ಆಗಿ ಬದುಕನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 80_90ರ ದಶಲದಲ್ಲಿ ಸಾಹಿತ್ಯ ಕೂಡ ಅವಿಭಕ್ತ ಕುಟುಂಬವನ್ನ ಪ್ರತಿನಿಧಿಸುತ್ತಿದ್ದವು. ಸಾಹಿತ್ಯದಿಂದ ಮಹಿಳೆಯರು ವಿಮುಖರಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಲೇಖಕಿಯರು ಬೇಕಾಗಿದ್ದಾರೆ. ಸಮಾಜ ಉಳಿಸಿ, ಬೆಳೆಸುವಲ್ಲಿ ಮಹಿಳೆಯರ ಪಾತ್ರವೂ ಪ್ರಧಾನವಾಗಿದೆ ಎಂದು ಡಾ. ಆರ್.ಎಂ. ಕುಬೇರಪ್ಪನವರು ತಿಳಿಸಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ, ರಾಜ್ಯಮಟ್ಟದ ಏಳನೆಯ ಲೇಖಕಿಯರ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಕರ್ನಾಟಕ ಚುಟುಕು ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಇದಕ್ಕೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೆಲಸ ಕಾರ್ಯವನ್ನ ಮೆಚ್ಚಬೇಕು. ಪರಿಷತ್ ನಿಂದ ಸಾಹಿತ್ಯ ಕ್ಷೇತ್ರ ಸದೃಢವಾಗಿದೆ ಎಂದು ಕಸಾಪದ ಕೆಲಸ ಕಾರ್ಯವನ್ನ ಶ್ಲಾಘಿಸಿದರು.
ಇದೇ ವೇಳೆ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಆರ್.ಎಂ ಕುಬೇರಪ್ಪನವರಿಗೆ ಅಮೃತ್ ಸಮ್ಮಾನ್ ಪ್ರಶಸ್ತಿಯನ್ನ ನೀಡಿ ಗೌರವಿಸಿದರು.
Post a Comment