-->
Bookmark

Gajendragad : ಮತದಾರರಿಗೆ ಶತಕೋಟಿ ನಮನಗಳು : ಮುತ್ತಣ್ಣ ಕಡಗದ್, ಶಿವಾನಂದ್ ಮಠದ್

Gajendragad : ಮತದಾರರಿಗೆ ಶತಕೋಟಿ ನಮನಗಳು : ಮುತ್ತಣ್ಣ ಕಡಗದ್, ಶಿವಾನಂದ್ ಮಠದ್ 

ಗಜೇಂದ್ರಗಡ : (Dec_03_2023)
ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಜಯ ಗಳಿಸಿದೆ. ಹೀಗಾಗಿ, ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ವತಿಯಿಂದ ಗಜೇಂದ್ರಗಡ ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ್, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ ಕೆಲಸ ಕಾರ್ಯಗಳಿಗೆ ಮೆಚ್ಚಿ ಮತದಾರ ಮತ ನೀಡಿದ್ದಾರೆ. ಮತದಾರರಿಗೆ ಶತಕೋಟಿ ನಮನಗಳು. ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆ ಈಡೇರಿಸಲಿದೆ. ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೆ ಬಿಂಬಿಸಲಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಕಾಣುತ್ತಿದೆ ಎಂದು ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ್ ಹೇಳಿದರು. 
ಇನ್ನೂ, ಶಿವಾನಂದ್ ಮಠದ್ ಮಾತನಾಡಿ, ದೇಶದಲ್ಲಿ ಬಿಜೆಪಿ ಅಲೆ ಕುಗ್ಗಿಲ್ಲ. ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಿರುವಾಗ, ಮತದಾರರು ಮತ ನೀಡಿದ್ದಾರೆ. ಮತದಾರರಿಗೆ ಅನಂತ, ಅನಂತ ಧನ್ಯವಾದಗಳು ಎಂದು ಶಿವಾನಂದ್ ಮಠದ್ ಅಭಿಪ್ರಾಯ ವ್ಯಕ್ತಪಡಿಸಿದರು. 
ವಿಜಯೋತ್ಸವದಲ್ಲಿ ಮಂಡಲ ಅಧ್ಯಕ್ಷರಾದ ಮುತ್ತಣ್ಣ ಕಡಗದ್, ಹಿರಿಯರಾದ  ಬಿ.ಎಂ. ಸಜ್ಜನ್, ಶಿವಾನಂದ್ ಮಠದ್,ಅಶೋಕ್ ವನ್ನಾಲ್,ರಾಜೇಂದ್ರ ಘೋರ್ಪಡೆ, ಕನಕಪ್ಪ ಅರಳಿಗಿಡದ್, ಉಮೇಶ್ ಮಲ್ಲಾಪುರ, ಮಾಂತೇಶ್ ಪೂಜಾರ್, ಉಮೇಶ ಚನ್ನು ಪಾಟೀಲ್,ಯಮನೂರು ತಿರಕೋಜಿ, ಬಿಕೆ ಸೂಡಿ, ಮುತ್ತಣ್ಣ ಚಟ್ಟೇರ್,ಸೂಗಿರೇಶ್ ಕಾಜಗಾರ್,ವಿಶ್ವನಾಥ್ ಕುಷ್ಟಗಿ, ಅನುರಾಗ ಚಿನಿವಾಲರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
Post a Comment

Post a Comment