-->
Bookmark

Gajendragad : ಡಾಭಾ ಆವರಣದಲ್ಲಿ ಕನಸುಸೇವಾ ಫೌಂಡೇಶನ್ ವತಿಯಿಂದ ಪರಿಸರ ಕಾಳಜಿ

Gajendragad : ಡಾಭಾ ಆವರಣದಲ್ಲಿ ಕನಸುಸೇವಾ ಫೌಂಡೇಶನ್ ವತಿಯಿಂದ ಪರಿಸರ ಕಾಳಜಿ

ಗಜೇಂದ್ರಗಡ : (Dec_08_2023)
ತೇಜಪ್ಪ ರಾಠೋಡ್ ಒಡೆತನದ ಉಚಣಗೇರಿ ರಸ್ತೆ ಬದಿಯಲ್ಲಿರುವ ಡಾಭಾ ಆವರಣದಲ್ಲಿ ಸಸಿಗಳನ್ನ ನೆಡಲಾಯ್ತು. ಕನಸು ಸೇವಾ ಫೌಂಡೇಶನ್ ವತಿಯಿಂದ ತೆಂಗು ಮತ್ತು ಬದಾಮ್ ಗಿಡಗಳನ್ನ ನೆಡಲಾಯ್ತು. ಪರಿಸರ ಸಂಕ್ಷಣೆ ಮಾಡಬೇಕು. ಪ್ರತಿ ಮನೆ ಮನೆಯಲ್ಲಿ ಮಹಿಳೆಯರು ಹೆಚ್ಚಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕನಸು ಸೆವಾ ಫೌಂಡೇಶನ್ ಸಂಸ್ಥಾಪಕರಾದ ರೇಣುಕಾ ಶಂಕರ್ ಏವೂರ್ ಹೇಳಿದರು. ಗಜೇಂದ್ರಗಡದ ಗುಡ್ಡ ಬರಿದಾಗಿದೆ. ಗುಡ್ಡದ ಮೇಲೆ ಗಿಡ, ಮರಗಳನ್ನ ಬೆಳೆಸುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು. 
ಕನಸು ಸೇವಾ ಫೌಂಡೇಶನ್ ವತಿಯಿಂದ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಸಹಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಪಟ್ಟಣದ ಉಣಚಗೇರಿ ರಸ್ತೆಯ ಪಕ್ಕದಲ್ಲಿ ರೇಣುಕಾ ಏವೂರ್ ಮತ್ತು ತಂಡ ತೆಂಗು, ಬಾದಾಮ್ ಗಿಡಗಳನ್ನ  ಹಚ್ಚಿ ಪರಿಸರ ಕಾಳಜಿ ಮೆರೆದರು. ಈ ವೇಳೆ, ಮಾತನಾಡಿದ ಮಹಿಳೆಯರು, ಪರಿಸರ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂಬರುವ ದಿನಗಳಲ್ಲಿ ಗಜೇಂದ್ರಗಡ ಬರಡು ಗುಡ್ಡದ ಮೇಲೆ ಗಿಡ, ಮರ ಗಳನ್ನ ಬೆಳೆಸುವ ಇರಾದೆ ಇದೆ ಎಂದು ಸಹ ತಿಳಿಸಿದರು.  
ಕನಸು ತರಬೇತಿ ಸಂಸ್ಥೆಯಲ್ಲಿ ಪಡೆಯುತ್ತಿರುವ ತ್ರಿವೇಣಿ ಚಂದಾನವರ್ ಮಾತನಾಡಿ, ನಾವು ಮದುವೆ, ಬರ್ತಡೇ, ಸೇರಿದಂತೆ ಇನ್ನಾವುದೇ ಸಭೆ ಸಮಾರಂಭ ವಿರಲಿ, Costly Giftsಗಳ ಬದಲಿದೆ. ಸಸಿಗಳನ್ನ ಕೊಡಬೇಕು. ಇಂತಹ ಪರಂಪರೆ ಪ್ರಾರಂಭವಾಗಬೇಕು. ಹೀಗೆ ಮಾಡಿದರೇ, ಪರಿಸರ ಉಳಿಸಿ, ಬೆಳೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ವೇಳೆ, ಅಪೂರ್ವಾ ದಂಡಿ ಮಾತನಾಡಿ, ಪರಿಸರ ಅಸಮತೋಲನ ವಾಗಲು ಪರಿಸರ ನಾಶವೇ ಮುಖ್ಯ ಕಾರಣ. ಅತಿವೃಷ್ಠಿ, ಅನಾವೃಷ್ಠಿ ಆಗುತ್ತಿದೆ. ಈ ಪ್ರಕೃತಿ ಅಸಮತೋಲನವನ್ನ ಸರಿಪಡಿಸಲು ಪರಿಸರ ಬೆಳೆಸಲೇಬೇಕೆಂದು ಹೇಳಿದರು. 
ಇನ್ನೂ, ಡಾಬಾ ಮಾಲೀಕರದಾ ತೇಜಪ್ಪ ರಾಠೋಡ್ ಅವರು, ಡಾಬಾ ದಲ್ಲಿ ಫರ್ನಿಚರ್ ಗಳಿವೆ. ನೀರಿನ ಕೊರತೆಯಾಗದಿರಲಿಬೆಂದು ಕೊಳವೆ ಬಾವಿಯ ವ್ಯವಸ್ಯ ಸಹ ಮಾಡಿದ್ದೇವೆ. ಉಣಚಗೇರಿ ಚತುಸ್ಪತ ಹೆದ್ದಾರಿಯಾಗಿದೆ. ಜೊತೆಗೆ ಗಜೇಂದ್ರಗಡದಿಂದ ಕೂಗಳತೆ ದೂರದಲ್ಲಿದೆ. ನೂತನ, ನಯವಾಗಿದ್ದು, ಋಚಿಕರ ತಿನಿಸುಗಳಿದ್ದರೇ, ಗ್ರಾಹಕರಿಗೆ ಕೊರತೆಯೇ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಡಾಭಾ ಮಾಡುವ ಇರಾದೆ ಇದ್ದವರೂ ಬಂದು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 
ಅದೇನೇ ಇರಲಿ ನಾವು ಮಾಡುವ ಕಾರ್ಯದಲ್ಲಿ ಪರಿಸರಕ್ಕೂ ಕಾಳಜಿ ನೀಡುವ ಇರಾದೆ ಇರುವುದು ಮಾತ್ರ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಕನಸು ಸೇವಾ ಫೌಂಡೇಶನ್ ಸಂಸ್ಥಾಪಕರಾದ ರೇಣುಕಾ ಏವೂರ್, ಶಂಕರ್ ಏವೂರ್, ಕನಸು ಸೇವಾ ಸಂಸ್ಥೆ ವಿದ್ಯಾರ್ಥಿಗಳಾದ ಅನ್ನಪೂರ್ಣ ವದೆಗೋಳ್, ರೇಖಾ ಹೊಸೂರ್, ದೀಪಾ ಮುದಗಲ್, ಅಪೂರ್ವ ದಂಡಿ, ಶ್ರೀದೇವಿ ನಂದನಜವಳಿಕಲ್, ತ್ರಿವೇಣಿ ಚಂದನವರ್, ಸಂಧ್ಯಾ ಭೋಸಲೆ, ಸಂಧ್ಯಾ ಭೋಸಲೆ, ವಿದ್ಯಾ ವರ್ಗ, ಭೀಮಾ ದಿವಾನವರ್, ಅನುಶಾ ಚಳ್ಳಿಮರ್, ಕೃಷ್ಣವೇಣಿ ಏವೂರ್, ಪರ್ವತಿ ರಾಯಬಾಗಿ, ಸೇರಿದಂತೆ Layout ಮಾಲೀಕರು ಭಾಗವಹಿಸಿದ್ದರು.
Post a Comment

Post a Comment