ಗಜೇಂದ್ರಗಡ : (Dec_14_2023)
ಸಂಸತನಲ್ಲಿ ನಡೆದ ದಾಳಿಯನ್ನ ಕಾಂಗ್ರೆಸ್ ಗದಗ ಜಿಲ್ಲಾ ವಕ್ತಾರ ಬಸವರಾಜ್ ಶೀಲವಂತರ್ ಖಂಡಿಸಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ. ಸಂಸದರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂಬುದು ಸಮಾಧಾನದ ಸಂಗತಿ. ಅತ್ಯಂತ ಬಿಗಿ ಭದ್ರತೆಯ ಹೊರತಾಗಿಯೂ, ಇಂತಹ ಘಟನೆ ನಡೆದಿರುವುದು ಅಪಾಯಕಾರಿ. ಇದು ಸಂಪೂರ್ಣ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಈ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನ ದೇಶದ ಮುಂದಿಡುವುದು ಕೇಂದ್ರ ಸರ್ಕಾರ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕರ್ತವ್ಯ ಎಂದು ಬಸವರಾಜ್ ಶೀಲವಂತರ್ ಹೇಳಿದ್ದಾರೆ.
ಇಪ್ಪತ್ತೆರಡು ವರ್ಷಗಳ ಹಿಂದೆ (13_12_2021) ಸಂಸತ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ದಿನವೇ ಆರಿಸಿಕೊಂಡು ದಾಳಿ ನಡೆದಿರುವುದು ಗಮನಿಸಿದರೆ, ಇದರ ಹಿಂದೆ ಬೇರೆ ಹುನ್ನಾರಗಳುರಬಹುದೆಂಬ ಸಂಶವೂ ಮೂಡುತ್ತದೆ. 2001ರ ದಾಳಿಯ ಸಮಯದಲ್ಲೂ BJP ನೇತೃತ್ವದ NDA ಸರ್ಕಾರ ಆಡಳಿತದಲ್ಲಿತ್ತು ಎಂಬುದು ಗಮನಿಸಬೇಕಾಗುತ್ತದೆ. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ Pratap Simha ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಪಾಸ್ ನೀಡಿರಬೇಕಾಗಿದ್ದರೆ ಯುವಕರು ಸಂಸದರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೆ ಇದ್ದರೆ, ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ದೇಶದ ಹೃದಯದಂತಿರುವ ಸಂಸತ್ ಭವನಕ್ಕೆ ಬೇರೆ ಯಾವುದೇ ಪ್ರದೇಶ ಇಲ್ಲವೆ ಕಟ್ಟಡವನ್ನು ಮೀರಿದ ಬಿಗಿ ಭದ್ರತೆಯನ್ನು ನೀಡಲಾಗಿದೆ. ಹೀಗಿದ್ದರೂ ಈ ಯುವಕರು ಸ್ಮೋಕ್ ಬಾಂಬ್ ಹಿಡಿದುಕೊಂಡು ಸಂಸತ್ ಒಳಗೆ ಹೇಗೆ ಪ್ರವೇಶಿಸಿದರು? ಈ ಕೃತ್ಯದಲ್ಲಿ ಒಳಗಿನವರೇ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಯುವಕರ ಕೃತ್ಯದ ಹಿಂದೆ ಬೇರೆ ಯಾವುದಾದರೂ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ? ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ Narendra Modi ಅವರದ್ದಾಗಿದೆ.
೨೦೧೯ ರ ಸಂಸತ್ ಚುನಾವಣಾ ಮುನ್ನ ದೇಶದ ಗಡಿ (ಪುಲ್ವಾಮ) ಸುರಕ್ಷಿತವಾಗಿರಲಿಲ್ಲ. ೨೦೨೪ ರ ಚುನಾವಣೆಗೆ ಮುನ್ನ ಸಂಸತ್ ಭವನವೆ ಅಸುರಕ್ಷಿತವಾಗಿದೆ ಅಂದರೆ ಮುಂದೇನು ಕಾದಿದೆಯೊ!?
ಸಂಸತ್ತಿನ ಇತಿಹಾಸದಲ್ಲೇ ಈ ಮಟ್ಟಿನ ಭದ್ರತಾ ಲೋಪವಾಗಿರಲಿಲ್ಲ,
ಡಿಸೆಂಬರ್ 13ರ ಒಳಗೆ ಸಂಸತ್ತನ್ನು ಸ್ಪೋಟಿಸುತ್ತೇವೆ ಎಂದು ಖಾಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ ನಂತರವೂ ಸಂಸತ್ತಿನ ಭದ್ರತೆಯನ್ನು ನಿರ್ಲಕ್ಷಿಸಿದ್ದೇಕೆ?
ದೇಶದ ಶಕ್ತಿ ಕೇಂದ್ರವಾದ ಸಂಸತ್ತಿಗೆ, ₹20 ಲಕ್ಷ ಕೋಟಿ ಖರ್ಚು ಮಾಡಿ ಕಟ್ಟಿದ ಸಂಸತ್ತಿಗೆ ಯಾರು ಬೇಕಿದ್ದರೂ ನುಗ್ಗಬಹುದೇ?
ಕೇವಲ ಒಂದು ಶಾಪಿಂಗ್ ಮಾಲಿನಲ್ಲಿ ಇರುವಷ್ಟು ಭದ್ರತೆಯೂ ಸಂಸತ್ತಿನಲ್ಲಿಲ್ಲದಿರುವುದು ಬಹುದೊಡ್ಡ ದುರಂತ.
ಈ ಕೃತ್ಯಕ್ಕೆ ಕೂಗುಮಾರಿ ಪ್ರತಾಪ್ ಸಿಂಹರ ಸಹಕಾರ ಇರುವುದು ಇನ್ನೊಂದು ದುರಂತ!
ವರದಿ : ಬಸವರಾಜ್ ಶೀಲವಂತರ್, ಗದಗ ಜಿಲ್ಲಾ ವಕ್ತಾರರು, ಕಾಂಗ್ರೆಸ್
Post a Comment