ಗಜೇಂದ್ರಗಡ : (Dec_20_2023)
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಪ್ರತಿಷ್ಠಿತ ಎಸ್. ಎಂಭೂಮರಡ್ಡಿ ಶಾಲೆಯಲ್ಲಿ ಮತ್ತೊಂದು ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ಪಟ್ಟಣದ ಸೇಂಟ್ ಜಾನ್ಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎಸ್.ಎಂ. ಭೂಮರಡ್ಡಿ ಹೈಸ್ಕೂಲ್ ನಲ್ಲಿ ೧೯೯೨-೯೩ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಒಂದೆಡೆ ಸೇರಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದರು. ಗುರು ವಂದನೇ, ಸ್ನೇಹ ಸಮ್ಮಿಲನ ನಡೆಸುವ ಬಗ್ಗೆ ಚರ್ಚೆ ನಡೆಸಿದರು. ಅಕ್ಷರ ಕಲಿಸಿದ ಗುರುಗಳಿಗೆ, ಜೀವನ ರೂಪಿಸಿದ ಶಾಲೆಯನ್ನ ನೆನೆದು ಭಾವುಕರಾದರು. ಇನ್ನೂ, ತಾವು ಒಟ್ಟಿಗೆ ಕಲಿತು, ಆಟೋಟದ ಜೊತೆಗೆ ಬಾಲ್ಯದ ಸವಿ ನೆನಪುಗಳನ್ನ ಮೆಲುಕು ಹಾಕಿದರು.
ಬ್ಯಾಚಿನಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ಮಹಾಂತೇಶ್ವರ ಹೊಸಮನಿ, ಡಾ. ಬಸವರಾಜ್ ಬಂಟನೂರ್, ಚಿದಾನಂದ ಹುದ್ದಾರ ಮಾಹಿತಿ ನೀಡಿದ್ದಾರೆ.
ಪೂರ್ವ ಭಾವಿ ಸಭೆಯಲ್ಲಿ ಡಾ. ಹುಸೇನಸಾಬ ಅತ್ತಾರ್, ಗುರುಮೂರ್ತಿ ಕೆಂಚಿ, ಜಗದೀಶ್ ಹೊಳಿ, ಅಶೋಕ್ ಶಿನ್ನೂರ್, ಮಲ್ಲು ಗೌಡರ್, ರೇಣಪ್ಪ ರಾಮಜಿ, ಮಂಜುನಾಥ್ ಚಿನ್ನೂರ್, ಮಾರುತಿ ಬುಟ್ಟಾ, ಮಹದೇವ ಶಿರೂರ್, ಅಂಬರೀಶ್ ಶಿವು, ಗಿರೀಶ್ ಸಂಕನೂರ್, ಉಸ್ಮಾನ್ ಗೋಡೆಕಾರ್, ವೀರಭದ್ರ ಗಂಜಿಗೌಡ್ರ, ಈರಣ್ಣ ಸೂಡಿ, ನಾಗರಾಜ್ ಘೋರಾ, ಆನಂದ್ ರುದ್ರಗಂಟಿ, ಮೈಬೂಬ್ ಡಂಗಿ, ಮೈನುದ್ದಿನ್ ಒಂಟಿ, ಮುದುಕಪ್ಪ ಅರಳಿಗಿಡದ್, ಶಿವರಾಜ್ ಸುಭೇದಾರ್, ಚನ್ನಬಸು ಸಕ್ರಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment