-->
Bookmark

Gajendragad : ಸೋಮವಾರ ಕನಕದಾಸರ ಜಯಂತ್ಯೋತ್ಸವ : ವ್ಹಿ.ಆರ್. ಗುಡಿಸಾಗರ್

Gajendragad : ಸೋಮವಾರ  ಕನಕದಾಸರ ಜಯಂತ್ಯೋತ್ಸವ : ವ್ಹಿ.ಆರ್. ಗುಡಿಸಾಗರ್ 
ಗಜೇಂದ್ರಗಡ : (Dec_22_2023)

ರೋಣ, ಗಜೇಂದ್ರಗಡ ತಾಲೂಕು ಕುರುಬರ ಸಂಘದಿಂದ ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಿಸಲಿದ್ದೇವೆ ಎಂದು ಸಮಾಜದ ಮುಖಂಡ ವ್ಹಿ. ಆರ್. ಗುಡಿಸಾಗರ್ ಹೇಳಿದರು. ಗಜೇಂದ್ರಗಡದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 25ರ ಸೋಮವಾರ ಪಟ್ಟಣದ ಜಗಜೀವನರಾಮ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 500 ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ಕನಕ ಭವನ ನಿರ್ಮಾಣ ಮಾಡುವ ಉದ್ದೇಶವೂ ಇದ್ದು, ಕನಕ ಭವನಕ್ಕೆ 25 ಗುಂಟೆ ಜಾಗವೂ ನಿಗದಿಯಾಗಲಿದೆ ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನ ಆಹ್ವಾನಿಸಲಿದ್ದೇವೆ ಎಂದು ಗುಡಿಸಾಗರ್ ಮಾಹಿತಿ ನೀಡಿದರು. ಶಾಸಕ ಜಿ.ಎಸ್.‌ ಪಾಟೀಲ್ ಅವರ ಅಧಿಕಾರಾವಧಿಯಲ್ಲೆ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು,  25 ರಂದು ನಡೆಯುವ ಕಾರ್ಯಕ್ರಮಕ್ಕೆ ಶಾಸಕ ಜಿ.ಎಸ್ ಪಾಟೀಲ್, ಮಠಾಧೀಶರು, ಗಣ್ಯ ವ್ಯಕ್ತಿಗಳು ಭಾಗವಹಸಲಿದ್ದಾರೆ ಎಂದು ಗುಡಿಸಾಗರ್ ತಿಳಿಸಿದರು. 
ಗಜೇಂದ್ರಗಡ ತಾಲೂಕು ಕುರುಬರ ಸಂಘ ಹಾಗೂ ರೋಣ ತಾಲೂಕು ಕುರುಬಸ ಸಂಘದಿಂದ ಶ್ರೀ ಕನಕದಾಸರ 536ನೇ ಜಯಂತ್ಯೋತ್ಸವ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ವ್ಹಿ. ಆರ್ ಗುಡಿಸಾಗರ್, ಹೆಚ್.ಎಸ್. ಸೋಂಪೂರ್, ಅಂದಪ್ಪ ಬಿಚ್ಚೂರ್, ಕೆ.ಎಸ್. ಕೊಡತಗೇರಿ, ರಾಮಚಂದ್ರ ಹುದ್ದಾರ್, ಎಸ್.ಕೆ ಕೆಂಪನಾಳ್, ಎ.ಎಸ್ ಅಡವಿ, ಬಸವರಾಜ್ ಬೆನಕನವಾರಿ, ಶರಣಪ್ಪ ಹಾದಿಮನಿ, ಅಶೋಕ್ ವದೆಗೋಳ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment

Post a Comment