-->
Bookmark

Gajendragad : ಶುಕ್ರವಾರ ಉದಯವಾಗಲಿದೆ ಬೀದಿಬದಿ ವ್ಯಾಪಾರಸ್ಥರ ವಿವಿದೋದ್ದೇಶ ಸಂಘ : ಕಳಕಪ್ಪ ಪೋತಾ

Gajendragad : ಶುಕ್ರವಾರ ಉದಯವಾಗಲಿದೆ ಬೀದಿಬದಿ ವ್ಯಾಪಾರಸ್ಥರ ವಿವಿದೋದ್ದೇಶ ಸಂಘ : ಕಳಕಪ್ಪ ಪೋತಾ 

ಗಜೇಂದ್ರಗಡ : (Dec_28_2023)
ಗಜೇಂದ್ರಗಡ ಪಟ್ಟಣ ಗದಗ ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿದೆ. ಬೀದಿಬದಿ ವ್ಯಾಪಾರಿಗಳ ಮೂಲಭೂತ ಸೌಲಭ್ಯ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಸಮಸ್ಯೆಗಳ ಪರಿಹಾರ ಇದುವರೆಗೂ ಆಗಿಲ್ಲ. ಬೀದಿಬದಿ ವ್ಯಾಪಾರಸ್ಥರು,  ತಮ್ಮ ಸಮಸ್ಯೆಗಳನ್ನ ಹಲವು ಬಾರಿ ಪತ್ರಕರ್ತರ ಗಮನಕ್ಕೂ ತಂದಾಗ, ಬೀದಿಬದಿ ವ್ಯಾಪಾರಿ ಸಂಘಟನೆಗಳ ಗಮನಕ್ಕೆ ತಂದಾಗ ನಿರ್ಲಕ್ಷ್ಯ ತೋರಿದ ಅದೆಷ್ಟೋ ಉದಾಹರಣೆಗಳಿವೆ. ಹೀಗೆ ಸಾಲು ಸಾಲು ಸಮಸ್ಯೆಗಳೊಂದಿಗೆ ಗದಗ ಜಿಲ್ಲೆಯಾದ್ಯಂತದಿಂದ ಬಂದ  ಬೀದಿಬಿದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಹ ಮಾಡಿದ್ದರು.
ಇದರಲ್ಲಿ ಕೆಲ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಸಹ  ಆರೋಪಿಸಿದ್ದರು. 
ಇದೆಲ್ಲವನ್ನ ಗಮನಿಸಿದ ಕರ್ನಾಟ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಳದ ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಭಾಷೆಸಾಬ್ ಮಲಸಮುದ್ರ ಅವರು, ಗಜೇಂದ್ರಗಡ ತಾಲೂಕ ಬೀದಿಬದಿ ವ್ಯಾಪಾರಸ್ಥರ ವಿವಿಧೋದ್ದೇಶ ಸಂಘಕ್ಕೆ ಅನುಮೋದನೆ ನೀಡಿದ್ದಾರೆ. ಅವರ ಆದೇಶದಂತೆ ಪಟ್ಟಣದಲ್ಲಿ ಉದಯಿಸಿದೆ. ಬೀದಿಬದಿ ವ್ಯಾಪಾರಸ್ಥರ ಧ್ಯೆಯೋದ್ದೇಶ ಈಡೇರಲಿದೆ. ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳದ ಅಧಿನದಲ್ಲಿ ಬೀದಿಬದಿ ವ್ಯಾಪಾರಿಗಳ ವಿವಿಧೋದ್ದೇಶ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ತಾಲೂಕಾಧ್ಯಕ್ಷ ಕಳಕಪ್ಪ ಪೋತಾ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. 
ಶುಕ್ರವಾರ ಡಿಸೆಂಬರ್ 29 ರಂದು ನವನಗರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಪೂಜಾ ನಡೆಯಲಿದ್ದು, ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. 
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಮತ್ತು ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ, ವಕೀಲರು ರಫೀಕ್ ತೋರಗಲ್, ಪಟ್ಟಣದ ಪ್ರತಿಷ್ಠಿತ  ವ್ಯಾಪಾರಸ್ಥರು ಮತ್ತು ಕಾಂಗ್ರೆಸ್ ಮುಖಂಡರಾದ ಸಿದ್ದಪ್ಪ ಬಂಡಿ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಶಿವರಾಜ್ ಘೋರ್ಪಡೆ, ಮಾಜಿ ಪುರಸಭೆ ಸದಸ್ಯ ಪ್ರಭು ಚವಡಿ, 52 ಸಮಾಜದ ಅಧ್ಯಕ್ಷರಾದ ಚಂಬಣ್ಣ ಚವಡಿ, ಪಟ್ಟಣ ಮಾರಾಟ ಸಮಿತಿ ಸದಸ್ಯರು, ನರೇಗಲ್ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ  ಮಂಜುಳಾ ರೇವಡಿ ಸೇರಿದಂತೆ ಅನೇಕ ಗಣ್ಯರು ಭಾವಗಹಿಸಲಿದ್ದಾರೆ. ತಾಲೂಕಾಧ್ಯಕ್ಷ ಕಳಕಪ್ಪ ಮಪೋತಾ, ಪ್ರಧಾನ ಕಾರ್ಯದರ್ಶಿ ಮಹಮ್ಮದಗೌಸ್ ಅಕ್ಕಿ, ಖಜಾಂಚಿ ಈರಣ್ಣ ಸೊಬರದ, ರಾಘವೇಂದ್ರ ಹೂಗಾರ್,ಅಲ್ಲಾಭಕ್ಷಿ ಮುಚ್ಚಾಲಿ, ಯಾಸಿನ್ ಮಾರನಬಸರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Post a Comment

Post a Comment