ಗಜೇಂದ್ರಗಡ : (Dec_20_2023)
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ವತಿಯಿಂದ "ಶ್ರೀ ಅನ್ನದಾನಿ ಅಕ್ಷರ ಜಾತ್ರೆ" ಜನವರಿ 13, 14ಕ್ಕೆ ನಡೆಯಲಿದೆ. ಹೀಗಾಗಿ, ಗಜೇಂದ್ರಗಡ ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಡಿಸೆಂಬರ್ 21ಕ್ಕೆ ಗಜೇಂದ್ರಗಡ ನಗರದಲ್ಲಿ ಅಕ್ಷರ ಜಾತ್ರೆಯ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದಾರೆ. ಕಾಲೇಜಿನ ಬೊಧಕ, ಬೊಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಡಿಸೆಂಬರ್ 21 ಗುರುವಾರದಂದು ಜಾಗೃತಿ ಜಾಥಾ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಾಲೇಜಿನಿಂದ ಆರಂಭವಾಗಿ ಜಾಥಾ ಕೆಕೆ ಸರ್ಕಲ್ ವರೆಗೆ ನಡೆಯಲಿದೆ. ಜಾಥಾದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶ್ರೀ ಅನ್ನದಾನೇಶ್ವರ ಮಠ ನಡೆದು ಬಂದ ದಾರಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಬಡವರ ಪಾಲಿಗೆ ಶ್ರೀ ಅನ್ನದಾನೇಶ್ವರ ಮಠ ಊಟ ನೀಡುತ್ತದೆ. ಜೊತೆಗೆ ಅಕ್ಷರ ದಾಸೋಹದೊಂದಿಗೆ ಜನ ಮಾನಸದಲ್ಲಿ ಬೇರೂರಿದೆ. ಆದ್ದರಿಂದ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಹಾಗೂ ಅಕ್ಷರ ಜಾತ್ರೆಗೆ ಬರುವಂತೆ ಆಹ್ಚಾನಿಸಲಾಗಿದೆ.
Post a Comment