Gajendragad : ವಿಶೇಷ ಚೇತನ ಶಾಲಾ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ : ಬೆಳಗಾವಿಯಲ್ಲಿ ಶಿಕ್ಷಕ ಬಾಗ್ವಾನ್ ನೇತೃತ್ವದಲ್ಲಿ ಪ್ರತಿಭಟನೆ
ಗಜೇಂದ್ರಗಡ : (Dec_04_2023)
ವಿಶೇಷ ಚೇತನ ಶಾಲಾ ಶಿಕ್ಷಕರ ಗೋಳು ಕೇಳುವವರೆ ಇಲ್ಲದಂತಾಗಿದೆ. ಕಳೆದ ಹಕವು ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ. ಸರ್ಕಾರ ಇವರಿಗೆ ಖಾಯಂ ಉದ್ಯೋಗ ನೀಡಿಲ್ಲ. ದುಬಾರಿ ಗಜತ್ತಿನಲ್ಲಿ ಕೆಲಸ ನಿರ್ವಹಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ಬೆಳಗಾವಿಯಲ್ಲಿ ಒಂದೆಡೆ ಅಧಿವೇಶನ ನಡೆಯುತ್ತಿದ್ದರೇ ಮತ್ತೊಂದೆಡೆ ವಿಶೇಷ ಚೇತನ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಗಮನ ಇತ್ತ ಸೆಳೆಯಲು ಪ್ರತಿಭಟನಾಕಾರರು ಪ್ರಯತ್ನಿಸುತ್ತಿದ್ದಾರೆ.
ಮತ್ತೊಂದೆಡೆ, ಇವರ ಬೆಂಬಲಕ್ಕೆ ನಿಲ್ಲಬೇಕಾದ ಪ್ರತಿಪಕ್ಷ ಕೂಡ ಇವರ ಜೊತೆಗಿಲ್ಲ. ಯಾರೋಬ್ಬ ಸಚಿವರು, ಶಾಸಕರು ಇತ್ತ ಗಮನ ಹರಿಸಿಲ್ಲ ನಾವು ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಗೆ ಮನವಿ ಸಲ್ಲಿಸಲು ಬಂದಿದ್ದೇವೆ ಎಂದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲನ ಕಿವುಡ ಮಕ್ಕಳ ಶಾಲೆಯ ಶಿಕ್ಷಕರಾದ ಆರ್ ಕೆ ಬಾಗವಾನ ಅವರು ಕಿರಾ ನ್ಯೂಸ್ ನೊಂದಿಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಈಗಲಾದರು, ಸರ್ಕಾರ ಬೇಡಿಕರಯನ್ನ ಈಡೇರಿಸಬೇಕಿದೆ. ಇಲ್ಲ ದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಕಿವುಡ ಮಕ್ಕಳ ಶಾಲೆಯ ಶಿಕ್ಷಕರಾದ ಆರ್ ಕೆ ಬಾಗವಾನ್, ರಾಜ್ಯಾದ್ಯಂತ ದಿಂದ ವಿಶೇಷ ಶಾಲೆ ಶಿಕ್ಷಕ, ಶಿಕ್ಷಕೇತರ ಸಂಘದ ಅಧ್ಯಕ್ಷರಾದ ಎಲ್.ಎಂ. ತಳಬಾಳ್, ಪ್ರಧಾನ ಕಾರ್ಯದರ್ಶಿಗಳಾದ ಬಾಹುಬಲಿ, ಸಂಕಣ್ಣವರ್, ಶಿವಕುಮಾರ್ ಕಾಟಿ, ಆನಂದ್ ಕಾಂಬಳೆ, ಶ್ರೀಮತಿ ಶಾಂತಾ, ಶ್ರೀಮತಿ ಜ್ಯೋತಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment