ಗಜೇಂದ್ರಗಡ : (Dec_03_2023)
ಬಿಜೆಪಿ ಚುನಾವಣಾ ರಣತಂತ್ರ ಭಿನ್ನವಾಗಿದೆ. ಕಾಂಗ್ರೆಸ್ ಓಟ್ ಶೇರ್ ಪಡೆದುಕೊಂಡರೂ, ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿದಲ್ಲಿದ್ದರೂ, ಅಲ್ಲಿ ಕಾಂಗ್ರೆಸ್ ಗೆಲುವು ಪಡೆಯಲಾಗುತ್ತಿಲ್ಲ. ಚುನಾವಣೆಯಲ್ಲಿ ಮತದಾರರನ್ನ ಸೆಳೆಯುವುದು ಸಹ ಒಂದು ಕಲೆಯಾಗಿದೆ..
ಛತ್ತಿಸಗಢದಲ್ಲಿ ಗೆಲುವು ಸಾಧಿಸಬಹುದಾಗಿತ್ತು. ಕೊನೆಯ ವರೆಗೂ ಬಿಜೆಪಿ ಸರಳವಾಗಿ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿದ್ದರೂ, ಕೆಲ ರಾಜಕೀಯ ವಿಶ್ಲೇಷಕರು ಕಾಂಗ್ರೆಸ್ ಗೆ ಅಷ್ಟು ಸುಲಭವಿಲ್ಲ ಎಂದು ಹೇಳಿದ್ದನ್ನ ಸ್ಮರಿಸಬಹುದು...
ರಾಜಸ್ಥಾನದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ. ಪರ್ಯಾಯ ಪಕ್ಷಕ್ಕೆ ಜನ ಮನ್ನಣೆ ಸಿಗುತ್ತದೆ. ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಬಹುದಾದ ಛತ್ತಿಸಗಢವನ್ನ ಬಿಜೆಪಿಗೆ ಬಿಟ್ಟುಕೊಟ್ಟಿದೆ ಎಂದೆ ಹೇಳಬಹುದು.
ಮತ್ತೊಂದೆಡೆ, ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯನ್ನ ಕಾಂಗ್ರೆಸ್ ಅತ್ತ್ಯುತ್ತಮವಾಗಿ ಬಳಸಿಕೊಂಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವುದು ತೆಲಂಗಾಣದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಬಿಜೆಪಿ ಸಹ ಕ್ಷೇತ್ರವನ್ನ ಹೆಚ್ಚಿಸಿಕೊಂಡಿದೆ. ಬಿಜೆಪಿ ಬಿ.ಆರ್.ಎಸ್ ಪಕ್ಷಕ್ಕೆ ಪರ್ಯಾಯವಾಗಿ ಬೆಳೆಯುವ ಅವಕಾಶ ಸಿಕ್ಕರೂ, ಅದನ್ನ ಸದುಪಯೋಗ ಪಡೆದುಕೊಳ್ಳಲಾಗಲಿಲ್ಲ.
ಈ ಫಲಿತಾಂಶ ನೋಡಿದರೇ, ದೇಶದಲ್ಲಿ ಪ್ರದೇಶಿಕ ಪಕ್ಷಗಳು ತಮ್ಮ ಮಹತ್ವವನ್ನ ಕಳೆದುಕೊಳ್ಳುತ್ತಿವೆ. ಶಕ್ತಿಹೀನ ಸ್ಥಿತಿಗೆ ತಲುಪಿವೆ.
ಕಾಂಗ್ರೆಸ್ ಮುಕ್ತ ಎನ್ನುವುದು ಸಹ ಹೇಳಿದಷ್ಟು ಸುಲಭವಿಲ್ಲ. ಕಾಂಗ್ರೆಸ್ ನ ಓಟ್ ಶೇರ್ ಹೆಚ್ಚಿರಬಹುದು. ಆದ್ರೆ, ಬಿಜೆಪಿ ಚುನಾವಣೆಗೆ ನಡೆಸುವ ತಂತ್ರಗಾರಿಕೆ ಕಾಂಗ್ರೆಸ್ ನಲ್ಲಿಲ್ಲ.
ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದರೇ, ರಾಜ್ಯಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಹೆಚ್ಚಾಗತ್ತಿತ್ತು. ಲೋಕಸಭೆಯಲ್ಲಿ ಮಂಡಿಸುವ ಬಿಲ್ ಗಳು ರಾಜ್ಯ ಸಭೆಯಲ್ಲಿ ಪಾಸಾಗದಂತೆ ತಡೆಯಲು ಒಂದು ಉತ್ತಮ ಅವಕಾಶವನ್ನ ಕಾಂಗ್ರೆಸ್ ಕೈ ಚೆಲ್ಲಿದೆ ಎಂದೆ ಹೇಳಬಹುದು.
ಈ ಚುನಾವಣಾ ಫಲಿತಾಂಶ ಬಿಜೆಪಿ ಹುಮ್ಮಸ್ಸನ್ನ ದ್ವಿಗುಣಗೊಳಿಸಿದೆ ಎಂದರೆ ತಪ್ಪಾಗಲ್ಲ.
ವಿಧಾನಸಭೆ ಚುನಾವಣ, ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದನ್ನ ಕಳೆದ ಲೋಕಸಭೆ ಚುನಾವಣೆಯಲ್ಲಿ ಗಮನಿಸಿದ್ದೇವೆ.
ಪದೆಪದೇ ಚರ್ಚೆಗೆ ಬರುವುದು ರಾಹುಲ್ ಗಾಂಧಿ ವರ್ಚಸ್ಸು. ಎಐಸಿಸಿ ಅಧ್ಯಕ್ಷರಾದ ಬಳಿಕ ಕರ್ನಾಟಕ ಮೊದಲನೆಯದ್ದು, ಈಗ ಪಂಚ ಪಂಚರಾಜ್ಯ ಚುನಾವಣೆ ಎರಡನೆಯದ್ದಾಗಿದೆ. ಇದು ಮಲ್ಲಿಕಾರ್ಜುನ್ ಖರ್ಗೆ ಅವರ ಸ್ಥಾನ, ಮಾನದ ಮೇಲೆ ಯಾವುದೇ ಪ್ರಭಾವ ಬೀರಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.
ಕಾಂಗ್ರೆಸ್ Overconfidence ನಲ್ಲಿತ್ತು ಎಂದೆನಿಸಿದರೂ, ಬಿಜೆಪಿ ಬಿಜೆಪಿಯನ್ನ ಕಟ್ಟಿಹಾಕಲಾಗುತ್ತಿಲ್ಲ. ದೇಶದಲ್ಲಿ ಒಂದು ಭಾರತ್ ಜೋಡೋ ನಡೆಸಿ, ಚುನಾವಣೆ ಎದುರಿಸುತ್ತಿರುವುದು, ಮತ್ತೊಂದೆಡೆ, ಕಾಂಗ್ರೆಸ್ ಗ್ಯಾರಂಟಿಗಳಿಂದ ಗೆಲ್ಲುತ್ತೇನೆ ಎನ್ನುವುದು ಸಹ ಎಲ್ಲೊ ತಾಳ ತಪ್ಪಿದಂತಿದೆ.
ಲೋಕಸಭೆ ಚುನಾವಣೆಗೆ ಇನ್ನೂ ಕೆಲವೆ ತಿಂಗಳು ಬಾಕಿ ಇದ್ದು, ಕಾಂಗ್ರೆಸ್ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಸಿದ್ಧವಾಗಿಲ್ಲ ಎಂದೆ ಹೇಳಬಹುದು.
Post a Comment