ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಮರೆಯುವಂತಿಲ್ಲ ಎಂದು ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಘೋರ್ಪಡೆ ಹೇಳಿದರು. ಗಜೇಂದ್ರಗಡದಲ್ಲಿ ನಡೆದ ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದಲ್ಲಿ IIT, IIM, ISRO ಸೇರಿದಂತೆ ಅನೇಕ ಸಂಸ್ಥೆಗಳನ್ನ ಕಟ್ಟಿದ್ದು, ಕಾಂಗ್ರೆಸ್ ಎಂದು ಕಾಂಗ್ರೆಸ್ ಕೊಡುಗೆಯನ್ನ ಸ್ಮರಿಸಿದರು. ಭಾರತ ಪ್ರಜಾಪ್ರಭುತ್ವದ ಪ್ರಬಲ ರಾಷ್ಟ್ರವಾಗಿ ನಿರ್ಮಾಣವಾಗಲು ಕಾಂಗ್ರೆಸ್ ಪಕ್ಷದ ಶ್ರಮವೇ ಕಾರಣ ಎಂದು ತಿಳಿಸಿದರು. 2014ರ ನಂತರ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಎಂಬಂತೆ ಬಿಂಬಿಸುತ್ತಾರೆ ಎಂದು ಪ್ರಧಾನಿ ಮೋದಿ ಅವರ ಹೇಳಿಕೆಯನ್ನ ಖಂಡಿಸಿದರು.
ಇದೇ ವೇಳೆ, ಎಡಿ ಕೋಲಕಾರ್ ಅವರು ಮಾತನಾಡಿ, ದೇಶದ ಅತ್ಯಂತ ಶಿಸ್ತಿನ ಪಕ್ಷ ಕಾಂಗ್ರೆಸ್ ಆಗಿದ್ದು, ಕಾಂಗ್ರೆಸ್ ಪಕ್ಷದಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನರೇಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ಗೋರ್ಪಡೆ, ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದಪ್ಪ ಬಂಡಿ, ನರೇಗಲ್ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರೇವಡಿ, ಶಾರದಾ ರಾಥೋಡ್, ಪುರಸಭೆ ಸದಸ್ಯ ಶ್ರೀಧರ್ ಬಿದರಳ್ಳಿ, ಸಿದ್ದು ಗೋಂಗಡಶೆಟ್ಟಿಮಠ, ಶ್ರೀಧರ್ ಗಂಜಿಗೌಡ, A D ಕೋಲ್ಕಾರ್, ಶರಣಯ್ಯ ಕಾರುಡಗಿಮಠ, ಅಂದಪ್ಪ ರಾಥೋಡ್, ಅರಿಯಂತ್ ಬಾಗಮಾರ್ ಸೇರಿದಂತೆ ಅನೇಕರು ಭಾಗವಹಿದಿದ್ದರು.
Post a Comment