ಗಜೇಂದ್ರಗಡ : (Dec_14_2023)
ಕಾಲಕಾಲೇಶ್ವರ ಪ್ರಧಾನ ಅರ್ಚಕರಾದ “ಕಲ್ಲಿನಾಥ್ ಭಟ್” ಅವರು ದೈವಾಧಿನರಾಗಿದ್ದಾರೆ.
ದಕ್ಷಿಣಕಾಶಿ ಎಂದೆ ಪ್ರಸಿದ್ಧಿ ಪಡೆದಿರುವ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದ ಬ್ರಹ್ಮ ಶ್ರೀ ಕಲ್ಲಿನಾಥ ಭಟ್ ನಾರಾಯಣ ಭಟ್ ಪೂಜಾರ ಅವರು ಗುರುವಾರ ದೈವಾಧಿನರಾಗಿದ್ದಾರೆ. ಅವರಿಗೆ (90) ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತಿದ್ದ ಶ್ರೀಯುತರು ಈ ಭಾಗದ ಆರಾಧ್ಯ ದೈವರಾಗಿದ್ದರು. ಸಾಕ್ಷಾತ ಕಾಲಕಾಲೇಶ್ವರನನ್ನ ಒಲಿಸಿಕೊಂಡಿದ್ದ ಅವರು ಭಕ್ತರು ಸಮಸ್ಯೆ ಎಂದು ಬಂದಾಗ ಆದರ, ಆತ್ಮೀಯತೆಯಿಂದ ಸಮಸ್ಯೆ ಪರಿಹರಿಸುತ್ತಿದ್ದರು. ಪೂಜೆ, ಪುನಸ್ಕಾರ ಸೇರಿದಂತೆ ಎಲ್ಲ ಕಾರ್ಯಕ್ಕೂ ಅವರು ಹೇಳುದಂತೆಯೇ ನಡೆಯುತ್ತಿತ್ತು. ಕಲ್ಲಿನಾಥ ಭಟ್ಟರು ಈ ಭಾಗದ ಜನರ ಪಾಲಿಗೆ ಆರಾದ್ಯದೈರಾಗಿದ್ದರು. ರೈತಾಪಿ ವರ್ಗದ ಜನರು ಅವರನ್ನ ಸಾಕ್ಷಾತ್ ದೇವರೆಂದೆ ಭಾವಿಸಿದ್ದರು. ಪಂಚಾಂಗ, ಆಯುರ್ವೇದ ಪಂಡಿತರಾಗಿದ್ದರು.
ಮೃತರ ಅಂತ್ಯಕ್ರಿಯೆ ಕಾಲಕಾಲೇಶ್ವರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಗಂಗಾಧರ ಹಳ್ಳ ( ಗಂಗಾನಗರ )ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶಿವರಾಜ್ ಘೋರ್ಪಡೆ, ಕಾಲಕಾಲೇಶ್ವರ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ್, ಯಶರಾಜ್ ಪ್ರತಾಪಸಿಂಹ ಘೋರ್ಪಡೆ, ಕೀರ್ತಿ ಘೋರ್ಪಡೆ, ಅರ್ಚಕರಾದ ರುದ್ರಯ್ಯಸ್ವಾಮಿ, ಮಲ್ಲಯ್ಯಸ್ವಾಮಿ, ಪ್ರಭುಸ್ವಾಮಿ, ಶಿವಕುಮಾರ ಸ್ವಾಮಿ, ಶಶಿಧರ್ ಹೂಗಾರ್, ರಾಜಣ್ಣ ಹಿರೇಮಠ, ಕಳಕಪ್ಪ ಹೂಗಾರ್, ಮುತ್ತಣ್ಣ ತಳವಾರ್, ಆನಂದ್ ಭಾಂಡಗೆ, ಪರಶುರಾಮ್ ಚಿಲಝರಿ, ಬಸಣ್ಣ ಹೊಗರಿ ಸೇರಿದಂತೆ ಕಾಲಕಾಲೇಶ್ವರ ಗ್ರಾಮದ ಗುರು ಹಿರಿಯರು ಸಂತಾಪ ಸೂಚಿಸಿದ್ದಾರೆ.
ಇನ್ನೂ, ಕೃಷ್ಣಪ್ಪ ರಾಠೋಡ್, ಲಾಲಪ್ಪ ರಾಠೋಡ್, ಗೋಪಾಲ್ ರಾಠೋಡ್, ಉಮೇಶ್ ರಾಠೋಡ್, ಶಂಕರ್ ರಾಠೋಡ್, ಕೃಷ್ಣ ರಾಠೋಡ್ ಅಂತಿಮ ದರ್ಶನ ಪಡೆದರು.
Post a Comment