ಗಜೇಂದ್ರಗಡ : (Dec_19_2023)
ಕೇರಳದಲ್ಲಿ ಕೊರೊನಾ ಉಪತಳಿ ಪತ್ತೆಯಾಗಿದ್ದು, ದೇಶಾದ್ಯಂತ ಚಳಿಗಾಲದಲ್ಲೂ ಬಿಸಿ, ಬಿಸಿ ಚರ್ಚೆಯಾಗುತ್ತಿದೆ. ಮೆಕ್ಕಾ, ಮದಿನಾ ಬಳಿಕ ವಿಶ್ವದಲ್ಲೆ ಅತಿ ಹೆಚ್ಚು ಭಕ್ತರನ್ನ ಹೊಂದಿರುವ ಶಬರಿಮಲೈಯಲ್ಲಿ ಮಕರ ಸಂಕ್ರಾಂತಿಯಂದು ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಡಿಸೆಂಬರ್ ಕೊನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾ ಧಾರಿಗಳು ಕೇರಳದ ಸುಪ್ರಸಿದ್ಧ ದೇವಸ್ಥಾನಕ್ಕೆ ತೆರಳಿ ದೇವರ ದ್ರಶನ ಪಡೆಯುತ್ತಿದ್ದಾರೆ. ಇನ್ನೂ, ಗಜೇಂದ್ರಗಡ, ರೋಣ ತಾಲೂಕಿನ ಹಲವು ಗ್ರಾಮಗಳ ನೂರಾರು ಭಕ್ತರು ತೆರಳಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ ಕೊರೊನಾ ಉಪತಳಿ JN.1 ಕಂಟಕವಾಗಿ ಪರಿಣಮಿಸಲಿದೆ.
ಕರ್ನಾಟಕ ಸರ್ಕಾರ ಈಗಾಗಲೇ, ಕೇರಳ ಮತ್ತು ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ಅಯ್ಯಪ್ಪ ಸನ್ನಿಧಿಗೆ ತೆರಳುವ ಭಕ್ತರಿಗೆ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಇದು ಈ ಭಾಗದ ಭಕ್ತರನ್ನ ಕಂಗೆಡಿಸಿದೆ. ಮಕರ ಸಂಕ್ರಾಂತಿಯಂದು ಮಕರಜ್ಯೋತಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ತೆರಳುತ್ತಾರೆ. ಭಕ್ತರು ದೇಶದ ವಿವಿಧ ಮೂಲೆಯಿಂದ ಆಗಮಿಸುತ್ತಾರೆ. ಅವರಲ್ಲಿ ಕೊರೊನಾ ಉಪತಳಿಯಿಂದ ಆತಂಕ ಹೆಚ್ಚಾಗಿದೆ.
ಕೇರಳ ಆರೋಗ್ಯ ಇಲಾಖೆ ಅತ್ಯುತ್ತಮವಾಗಿದ್ದು, ಕೇರಳದಲ್ಲಿ ಎಡ ಪಕ್ಷ ಆಡಳಿತದಲ್ಲಿದೆ. ಹೀಗಾಗಿ, ಕೊರೊನಾ ರೂಪಾಂತರಿ ಹರಡುವಿಕೆ ವಿಷಯ ವಿಟ್ಟುಕೊಂಡು ಕೇರಳದಲ್ಲಿ ರಾಜಕೀಯ ಕೆಸರೆರಚಾಟ ನಡೆಸಲಾಗುತ್ತಿದೆ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಾಗುತ್ತಿದೆ.
ಅದೇನೇ ಇರಲಿ, ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ತೆರಳುವ ಭಕ್ತರು ಮುಂಜಾಗ್ರತೆ ವಹಿಸುವುದು ಒಳಿತು.
Post a Comment