ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯ್ತು. ಅಂಬೇಡ್ಕರ್ ಭಾವ ಚಿತ್ರಕ್ಕೆ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತಮಾಡಿದ ಯುವ ಮುಖಂಡ ಅಂದಪ್ಪ ರಾಠೋಡ್, ನಾವೆಲ್ಲರೂ, ಇಂದು ಸಮನಾಗಿ ಬದುಕುವಂತೆ ಮಾಡಿದ್ದೇ ಭೀಮರಾವ್. ಅವರು ಹಾಕಿಕೊಟ್ಟ ಸಂವಿಧಾನ ಚೌಕಟ್ಟಿನಲ್ಲೆ ನಾವು ಬದುಕಬೇಕು. ಅದೇ ನಾವು ಮಹಾನಾಯಕನಿಗೆ ಸಲ್ಲಿಸುವ ಗೌರವ ಎಂದು ಅಭಿಪ್ರಾಯ ಪಟ್ಟರು.
ಇದೇ ವೇಳೆ, ತಾಲೂಕಾಧ್ಯಕ್ಷ ಹನುಮಂತಗೌಡ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಸಂವಿಧಾನ ರಚಿಸಿದ್ದಾರೆ. ಅದನ್ನ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಈ ವೇಳೆ, ತಾಲೂಕಾಧ್ಯಕ್ಷ ಹನುಮಂತ ಗೌಡ, ಉಪಾಧ್ಯಕ್ಷ ಅಂದಪ್ಪ ರಾಥೋಡ್, ಪ್ರಕಾಶ್ ರಾಥೋಡ್, ಗಿರೀಶ್ ರಾಥೋಡ್, ಕಿರಣ್ ನಿಡಗುಂದಿ, ಪ್ರಭು ನಿಡಗುಂದಿ, ಬಸವರಾಜ್ ಬಂಕದ್, ರೂಪಲೇಶ್ ರಾಥೋಡ್, ಮತ್ತು ಅನೇಕರು ಉಪಸ್ಥಿತರಿದ್ರು.
Post a Comment