-->
Bookmark

Gajendragad : ಮಹಿಳಾ ಕನಸಿಗೆ ಒಗ್ಗಟ್ಟೆ ಬಲ : ಶಿವರಾಜ್ ಘೋರ್ಪಡೆ

Gajendragad : ಮಹಿಳಾ ಕನಸಿಗೆ ಒಗ್ಗಟ್ಟೆ ಬಲ : ಶಿವರಾಜ್ ಘೋರ್ಪಡೆ 

ಗಜೇಂದ್ರಗಡ : ( Dec_17_2023)
ಮಹಿಳೆಯರು ಕೆಲಸ‌ ಸಾಧನೆಗಾಗಿ ಒಗ್ಗಟ್ಟಾಗಿ, ಎಲ್ಲರೂ ಒಂದೆ ಕುಟುಂಬದಂತಿದ್ದು, ಒಬ್ಬರಿಗೊಬ್ಬರು ಬಿಟ್ಟು ಕೊಡದಿರುವುದು ಸಹ ಗುರಿ ಸಾಧನೆಗೆ ರಹದಾರಿ ಎಂದು ಶಿವರಾಜ್ ಘೋರ್ಪಡೆ ಹೇಳಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡದ ಕೃಷ್ಣ, ಮನು ನಿವಾಸದಲ್ಲಿ ಕನಸು ಸೇವಾ ಫೌಂಡೇಶನ್ ಹಮ್ಮಿಕೊಂಡಿದ್ದ 10ನೇ ಬ್ಯಾಚ್ ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತಮಾಡಿದ ಅವರು, ಬೇರೆ ಬೇರೆ ರೀತಿಯ ಕಾರ್ಯಕ್ರಮ ನೋಡಿದ್ದೇನೆ. ನಿಮ್ಮಲ್ಲಿನ ಒಗ್ಗಟ್ಟಿದೆ. ಒಗ್ಗಟ್ಟಿನಲ್ಲೇ ಬಲವಿದೆ  ಒಗ್ಗಟ್ಟನ್ನ ಬಿಟ್ಟುಕೊಡಬೇಡಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. 
ಮಹಿಳೆಯರು, ನಿಮ್ಮ, ನಿಮ್ಮ ಮನೆಯಿಂದ ಹೊರಬಂದಿದ್ದು, ಹೊಸ ಆಲೋಚನೆಗೆ ನಾಂದಿ ಹಾಡುತ್ತದೆ. ಮಹಿಳೆಯರು ರಾಜಕೀಯ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.  ರಾಷ್ಟ್ರಪತಿಯಾದ ಉದಾಹರಣೆಯೂ ಇದೆ ಎಂದು ತಿಳಿ ಹೇಳಿದರು. 
ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎಂಬುದನ್ನ ತೋರಿಸಿದ್ದಾರೆ ಎಂದು ಹೆಮ್ಮೆ ಪಟ್ಟರು.  
ನಮ್ಮ ಸುತ್ತ ಮುತ್ತಲಿನ ಆಗುಹೋಗುಗಳ ಬಗ್ಗೆ ತಿಳಿದುಕೊಂಡಾಗ, ನಾವು ಏನು ಮಾಡಬೇಕೆಂದು ಅರಿವಾಗುತ್ತದೆ ಎಂದಯ ಹೇಳಿದರು. ಇನ್ನೂ, ಚಂದ್ರಯಾನ ಉಡ್ಡಯನದಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರವನ್ನು ಸಹ ನಾವು ನೆನೆಯಬೇಕೆಂದು ಹೇಳಿದರು. ಕನಸು ಮಹಿಳಾ ಫೌಂಡೇಶನ್ ಗೆ ಬೇಕಾಗುವ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕಿದೆ. ಸಾಕ್ಷರತೆ ಹೆಚ್ಚಾಗಲು ಮಹಿಳೆಯರ ಪಾತ್ರವೂ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದೇ ವೇಳೆ, ಹಿರಿಯ ವಕೀಲರಾದ ಎಸ್. ಬಿ ಹಿಡಕಿಮಠ ಮಾತನಾಡಿ, ಜಾಗತೀಕರಣಚಾದ ಬಳಿಕ ಆರಿ ವರ್ಕ್, ಬಾಸ್ಕೆಟ್, ಹೆಣಿಕೆ ಮೂಲೆಗುಂಪಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಇಂತಹ ಕಲೆಯನ್ನ ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದಕ್ಕೆ ಕನಸು ಸೇವಾ ಫೌಂಡೇಶನ‌ ಕೆಲಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮಧ್ಯೆ, ಕೇಲವ ೧೦ ಸಂಚಿಕೆ‌ ಅಲ್ಲ, ನೂರು ಸಂಚಿಕೆಯಾಗಲಿ ಎಂದು ವಕೀಲರಾದ ಎಸ್.ಬಿ. ಹಿಡಕಿಮಠ ಶುಭ ಕೋರಿದರು.
ಕನಸು ಸೇವಾ ಫೌಂಡೇಶನ್ ಸಂಸ್ಥಾಪಕರಾದ ರೇಣುಕಾ ಏವೂರ್ ಮಾತನಾಡಿ, 10ನೇ ಬ್ಯಾಚ್ ಗೆ ರಾಜಮನೆತನದ ಕುಡಿ ಬಂದಿದ್ದು, ನಮಗೆ ಹೆಮ್ಮೆ ಎಂದು ಶುವರಾಜ್ ಘೋರ್ಪಡೆ ಅವರ ಸಮಾಜಿಕ ಕಾರ್ಯವನ್ನ ನೆನೆದರು. 
ಇದೇ ವೇಳೆ, ಮಹಿಳೆಯರಿಗೆ ಮನೆಯಲ್ಲಿ ಪ್ರೋತ್ಸಾಹ ಸಿಗಬೇಕು, ಅಂದಾಗ ಮಾತ್ರ ಯಶಸ್ಸು ಸಾಧಿಸಲು ಕಾರಣವಾಗುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಎಲ್ಲರಿಗೂ ಈ ಸೌಲಭ್ಯ ಸಿಗಲಿ ಎಂದು ಉಚಿತ ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು. 

ಮುಂಬರುವ ದಿನಗಳಲ್ಲಿ ಕಸದಿಂದ ರಸ ಮಾಡುವ ಉದ್ದೇಶ ಹೊಂದಿದ್ದೇವೆ. ಅದು ವಿನೂತನ ಕೆಲಸವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಇದು ಹೊಸ ಕ್ರಾಂತಿ ಮಾಡಲಿದೆ ಎಂದು ಮುಂದಿನ ಕ್ಲಾಸಿನ ಗುಟ್ಟು ಬಿಚ್ಚಿಟ್ಟರು. 


ಶ್ರೀದೇವಿ ಪ್ರಾರ್ಥಿಸಿದ್ರೆ, ವಿದ್ಯಾ ಭೋಸಲೆ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನ ತ್ರಿವೇಣಿ ಚಂದಾನವರ್ ನೆರವೇರಿಸಿದರು. ಅರುಣಾ ದಡ್ಡಿ, ಶ್ರೀದೇವಿ ಹಾಡು ಹಾಡಿದರು. ರಘುನಂದನ್ ಜವಳೇಕರ್ ಪುಣಾಣಿ ಕನ್ನಡ ಹಾಡ‌ನ್ನ ಹಾಡಿ, ಕನ್ನಡಾಭಿಮಾನ ಮೆರೆದ್ರು. 

ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಸಹ ವಿತರಿಸಲಾಯ್ತು. ಕಾರ್ಯಕ್ರಮದಲ್ಲಿ ಶಿವರಾಜ್ ಘೋರ್ಪಡೆ ಪ್ರಮಾಣ ಪತ್ರ ವಿತರಿಸಿದರು.

ಅಧ್ಯಕ್ಷರಾದ ರೇಣುಕಾ ಏವೂರ್, ಪ್ರಾಧಾನ ಕಾರ್ಯದರ್ಶಿ ಶಂಕರ್ ಏವೂರ್, ಅನ್ನಪೂರ್ಣ ವದೇಗೋಳ್‌, ರೇಖಾ ಹೊಸೂ‌ರ್, ದೀಪಾ ಮುದಗಲ್‌, ಅಪೂರ್ವ ದಂಡಿ, ಶ್ರೀದೇವಿ ನಂದನಜವಳಿಕಲ್‌, ತ್ರಿವೇಣಿ ಚಂದನವರ್, ಸಂಧ್ಯಾ ಭೋಸಲೆ, ವಿದ್ಯಾ ವರ್ಗಾ, ಭೀಮಾ ದಿವಾನವ‌ರ್, ಅನುಶಾ ಚಳ್ಳಿಮರದ್, ಕೃಷ್ಣವೇಣಿ ಏವೂ‌ರ್, ಪಾರ್ವತಿ ರಾಯಬಾಗಿ ಸೇರಿದಂತೆ ಅನೇಕರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದ್ರು...
Post a Comment

Post a Comment