-->
Bookmark

Gajendragad : ಮಧ್ಯ ಪ್ರದೇಶ, ರಾಜಸ್ಥಾನ, ಛತ್ತಿಸಗಢ, ತೆಲಂಗಾಣದಲ್ಲಿ ಇಂದು ಮತ ಎಣಿಕೆ

Gajendragad : ಮಧ್ಯ ಪ್ರದೇಶ, ರಾಜಸ್ಥಾನ, ಛತ್ತಿಸಗಢ, ತೆಲಂಗಾಣದಲ್ಲಿ ಇಂದು ಮತ ಎಣಿಕೆ 

ಗಜೇಂದ್ರಗಡ :(Dec_03_2023)

638 ಕ್ಷೇತ್ರ, 7,643 ಅಭ್ಯರ್ಥಿಗಳು

ನಾಲ್ಕು ರಾಜ್ಯಗಳ 638 ಸ್ಥಾನಗಳಿಗೆ
 ನಡೆದ ಚುನಾವಣೆಯಲ್ಲಿ 7,643 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಭವಿಷ್ಯ ಭಾನುವಾರ ನಿರ್ಧಾರ ವಾಗಲಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.

ಈ ರಾಜ್ಯಗಳು ಒಟ್ಟಾಗಿ 82 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಈ ಕ್ಷೇತ್ರಗಳ ಪೈಕಿ, 2019ರ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿದ್ದವು.

ಐದು ರಾಜ್ಯ ಗಳಿಗೆ ಚುನಾವಣೆ ನಡೆದಿತ್ತು. ಡಿ.3ರಂದು ನಾಲ್ಕು ರಾಜ್ಯಗಳ ಮತ ಎಣಿಕೆ ನಡೆಯಲಿದ್ದು, ಮಿಜೋರಾಂನಲ್ಲಿ ಮಾತ್ರ ಸೋಮವಾರ ಮತ ಎಣಿಕೆ ನಡೆಯಲಿದೆ. 


Post a Comment

Post a Comment