-->
Bookmark

Gajendragad : ಜನಾದೇಶಕ್ಕೆ ತಲೆ ಬಾಗುತ್ತೇವೆ : B.S ಶೀಲವಂತರ್

Gajendragad : ಜನಾದೇಶಕ್ಕೆ ತಲೆ ಬಾಗುತ್ತೇವೆ : B.S ಶೀಲವಂತರ್ 

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಸವರಾಜ್ ಶೀಲವಂತರ್ ಹೇಳಿದರು. 

ಕಿರಾ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ತೆಲಂಗಾಣ ಮತದಾರರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇವೆ. ತೆಲಂಗಾಣದಲ್ಲಿ ಕರ್ನಾಟಕದ ಪ್ರಭಾವ ಹೆಚ್ಚಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ‌.ಸಿ ಅಧ್ಯಕ್ಷ ಹಾಗೂ 
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸೇರಿದಂತೆ ಅನೇಕ ಸಚಿವರಿಗೆ ಈ ಗೆಲುವು ಸಲ್ಲಬೇಕು. 

ತೆಲಂಗಾಣ ಚುನಾವಣೆಯಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ್ ಅವರು ಭಾಗವಹಿಸಿದ್ದರು. ಚುನಾವಣಾ ರಣತಂತ್ರ ರೂಪಿಸುವಲ್ಲಿ ನಮ್ಮ ಶಾಸಕರ ಪಾತ್ರ ವಿದೆ. ಹೀಗಾಗಿ, ಈ ಗೆಲುವನ್ನ ರೋಣ ಕ್ಷೇತ್ರದ ಮತದಾರರು ಗಮನಿಸುತ್ತಿರುವುದು ಖುಷಿ ತಂದಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಸವರಾಜ್ ಶೀಲವಂತರ್ ಹೇಳಿದರು. 

ಛತ್ತಿಸಗಢ, ರಾಜಸ್ಥಾನ, ಮಧ್ಯಪ್ರದೇಶ ಗೆಲ್ಲದಿರಬಹುದು, ಆದರೆ, ಜನಾದೇಶಕ್ಕೆ ತಲೆಬಾಗುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎಸ್. ಶೀಲವಂತರ್ ಹೇಳಿದರು.
Post a Comment

Post a Comment